ಮಂಗಳೂರು: ಮಂಗಳೂರು ನಗರವು ಸ್ಮಾರ್ಟ್ ಸಿಟಿ ಯೋಜನೆಯಡಿ ಬರುವಂತೆ ಮಾಡಿದವರು ಮಾಜೀ ಶಾಸಕ ಜೆ. ಆರ್. ಲೋಬೋ ಅವರು. ಸ್ಮಾರ್ಟ್ ಸಿಟಿ ಯೋಜನೆಯನ್ನು ಅಡ್ಡಾದಿಡ್ಡಿ ಆಗಿಸಿದವರು ಬಿಜೆಪಿಯವರು ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ, ಕುದ್ರೋಳಿ ಆಲಯದ ಪದ್ಮರಾಜ್ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.
ಬಿಜೆಪಿಯದು ಅತಿ ದೊಡ್ಡ ಸಾಧನೆ ಬೆಲೆಯೇರಿಕೆ ಮತ್ತು ನಿರುದ್ಯೋಗ. ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಲೋಬೋರವರು ಆಡಳಿತದ ಅನುಭವ ಹೊಂದಿದ್ದು ನಗರಾಭಿವೃದ್ಧಿಯಲ್ಲಿ ಶ್ರಮಿಸಿದವರು ಎಂದು ಪದ್ಮರಾಜ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೇಸಮ್ಮ, ಪ್ರಕಾಶ್ ಸಾಲಿಯಾನ್, ಟಿ. ಕೆ. ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.