ಕಾರ್ಕಳ ತಾಲೂಕಿನ ನಿಟ್ಟೆಯ ವ್ಯಾಘ್ರ ಚಾಮುಂಡಿ ಬ್ರಹ್ಮಬೈದರ್ಕಳ ಗರಡಿಯ ಬಳಿಯ ಕಾರ್ಕಳ ಪಡುಬಿದ್ರಿಯ ರಾಜ್ಯ ಹೆದ್ದಾರಿ ಸಮೀಪದ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಕೂಡಲೇ ಆಗಮಿಸಿದ ಕಾರ್ಕಳ ಅಗ್ನಿ ಶಾಮಕದಳದವರ ಕಾರ್ಯಾಚರಣೆಯಿಂದ ಹೆಚ್ಚಿನ ಅವಘಡ ಸಂಭವಿಸಿಲ್ಲ.
ಠಾಣಾಧಿಕಾರಿ ಅಲ್ಬಾರ್ಟ್ ಮೋನೀಸ್, ಚಾಲಕ ಚಂದ್ರಶೇಖರ, ಸಿಬ್ಬಂದಿಗಳಾದ ನಿತ್ಯಾನಂದ, ಭೀಮಪ್ಪ, ರವಿಚಂದ್ರ ಕಾರ್ಯಾಚರಣೆಯಲ್ಲಿದ್ದರು.