ಮಂಗಳೂರು: ತುಲುವೆರೆ ಕಲ ಟ್ರಸ್ಟ್ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಮಂಗಳೂರಿನ ಕೆನರಾ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ ಪದಗ್ರಹಣ ಹಾಗೂ 'ತುಡರ್ ಪರ್ಬ' ಕಾರ್ಯಕ್ರಮದಲ್ಲಿ ನಡೆಯಿತು.

ಮುಂಬೈ ಘಟಕ ಅಧ್ಯಕ್ಷರಾಗಿ ಪ್ರಫುಲ್ಲಾ ದಿನೇಶ್ ಶೆಟ್ಟಿ ಪಡುಕುಡೂರ್ (ಡೊಂಬಿವಿಲಿ), ಪ್ರಧಾನ ಕಾರ್ಯದರ್ಶಿಯಾಗಿ ಶೋಭಾ ಎಸ್.ಶೆಟ್ಟಿ ನೆಲ್ಲಿದಡಿಗುತ್ತು(ಥಾಣೆ), ಜತೆ ಕಾರ್ಯದರ್ಶಿಯಾಗಿ ಸವಿತಾ ಚಂದ್ರಶೇಖರ ಸಾಲಿಯಾನ್ ಕುಳಾಯಿ (ಡೊಂಬಿವಿಲಿ), ಕೋಶಾಧಿಕಾರಿಯಾಗಿ ಮೈನಾ ಪದ್ಮನಾಭ್ ಶೆಟ್ಟಿ ಪಡುಕುಡೂರ್ (ಡೊಂಬಿವಿಲಿ), ಸಂಘಟನಾ ಕಾರ್ಯದರ್ಶಿಯಾಗಿ ಲಕ್ಷ್ಮೀನಾರಾಯಣ ಶೆಟ್ಟಿ ಹರೇಕಳ ಕಲ್ಯಾಣ್, ಬರಹ ಕೂಟದ ಪ್ರಮುಖರಾಗಿ ಕುಮುದಾ ಡಿ.ಶೆಟ್ಟಿ ಮುಗೆರೋಡಿ (ಕಲ್ಯಾಣ್) ನೇಮಕಗೊಂಡರು.

ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಬಿ. ಉದ್ಘಾಟಿಸಿದರು. ತುಲುವೆರೆ ಕಲ ಟ್ರಸ್ಟ್ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಗೋವಿಂದದಾಸ ಕಾಲೇಜಿನ ಉಪನ್ಯಾಸಕಿ ಅಕ್ಷತಾ ವಿ. 'ಗೇನೊದ ತುಡರ್' ಉಪನ್ಯಾಸ ನೀಡಿದರು. ಟ್ರಸ್ಟ್‌ನ ಗೌರವಾಧ್ಯಕ್ಷ ಮುದ್ದು ಮೂಡುಬೆಳ್ಳೆ, ಮಾರ್ಗದರ್ಶಕರಾದ ಸದಾನಂದ ನಾರಾವಿ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ್ ಆಚಾರ್ಯ ಎಡಪದವು ಪ್ರಾರ್ಥಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ಸಮಿತಿ:

ಟ್ರಸ್ಟ್‌ನ ಮಂಗಳೂರು ಸಮಿತಿ ಗೌರವಾಧ್ಯಕ್ಷರಾಗಿ ಮುದ್ದು ಮೂಡುಬೆಳ್ಳೆ, ಅಧ್ಯಕ್ಷರಾಗಿ ಗೀತಾ ಲಕ್ಷ್ಮೀಶ್, ಉಪಾಧ್ಯಕ್ಷರಾಗಿ ಶ್ರೀಶಾವಾಸವಿ ತುಳುನಾಡ್, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಶೆಟ್ಟಿ ದೋಟ, ಜತೆ ಕಾರ್ಯದರ್ಶಿಯಾಗಿ ರೇಣುಕಾ ಕಣಿಯೂರು, ಕೋಶಾಧಿಕಾರಿಯಾಗಿ ಪ್ರಶಾಂತ್ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಎಚ್ಕೆ ನಯನಾಡು, ಜತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದಿವ್ಯಶ್ರೀ ಪುತ್ತೂರು, ಸಂಘಟನಾ ಕಾರ್ಯದರ್ಶಿಯಾಗಿ ಪದ್ಮನಾಭ ಪೂಜಾರಿ ಬಂಟ್ವಾಳ, ಜತೆ ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಹಾಸ ಕುಂಬಾರ ಬಂದಾರು, ಸಾಮಾಜಿಕ ಜಾಲತಾಣ ನಿರ್ವಾಹಕರಾಗಿ ದಿವ್ಯಾ ಅಂಚನ್, ತುಲುವೆರೆ ಕಲ ಗ್ರೂಪ್ ನಿರ್ವಾಹಕರಾಗಿ ಆರ್.ಕೆ.ನಿರಂಜನ್, ಸಾಹಿತ್ಯ ಸಮಿತಿ ನಿರ್ವಾಹಕರಾಗಿ ಉಮೇಶ್ ಶಿರಿಯ, ಅಶೋಕ ಎನ್.ಕಡೇಶಿವಾಲಯ, ವಿಶ್ವನಾಥ ಕುಲಾಲ್ ಮಿತ್ತೂರು, ಶ್ಯಾಮ್‌ಪ್ರಸಾದ್ ಭಟ್ ನೇಮಕಗೊಂಡರು.

'ತುಡರ್' ಕವಿಗೋಷ್ಠಿ:

ಬಳಿಕ ನಡೆದ 'ತುಡರ್' ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ, ಉಪನ್ಯಾಸಕ ರಘು ಇಡ್ಕಿದು ವಹಿಸಿದ್ದರು. ಕವಿಗಳಾದ ವಿಶ್ವನಾಥ ಕುಲಾಲ್ ಮಿತ್ತೂರು. ಡಾ.ಸುರೇಶ್ ನೆಗಳಗುಳಿ, ಉಮೇಶ್ ಶಿರಿಯ, ಪೂರ್ಣಿಮಾ ಕೋಟ್ಯಾನ್ ಮಾರ್ನಾಡ್, ಕೆ.ಶಶಿಕಲಾ ಭಾಸ್ಕರ್ ದೈಲಾ, ಪ್ರಶಾಂತ್ ಆಚಾರ್ಯ ಎಡಪದವು, ರವೀಂದ್ರ ಕುಲಾಲ್ ವರ್ಕಾಡಿ, ಅಶ್ವಿನಿ ತೆಕ್ಕುಂಜ ಕುರ್ನಾಡ್, ಶ್ಯಾಮ್‌ಪ್ರಸಾದ್ ಭಟ್, ಪದ್ಮನಾಭ ಪೂಜಾರಿ ಬಂಟ್ವಾಳ, ನಳಿನಿ ಭಾಸ್ಕರ್ ರೈ ಮಂಚಿ, ಅನುರಾಧಾ ರಾಜೀವ್ ಸುರತ್ಕಲ್, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ಸೌಮ್ಯಾ ಆರ್.ಶೆಟ್ಟಿ, ಅಶೋಕ ಎನ್.ಕಡೇಶಿವಾಲಯ, ಸತೀಶ್ ಬಿಳಿಯೂರು, ವಿದ್ಯಾಶ್ರೀ ಅಡೂರ್, ಹಿತೇಶ್ ಕುಮಾರ್ ಎ., ಮಲ್ಲಿಕಾ ಜೆ.ರೈ ಪುತ್ತೂರು, ಆಕಾಶ್ ಗೇರುಕಟ್ಟೆ, ಗುಲಾಬಿ ಸುರೇಂದ್ರ ಸುರತ್ಕಲ್, ಸವಿತಾ ಕರ್ಕೇರ ಕಾವೂರು, ರಮ್ಯಾ ಎನ್., ಶ್ರೀಶಾವಾಸವಿ ತುಲುನಾಡ್, ಗೀತಾ ಲಕ್ಷ್ಮೀಶ್ ಕಬಿತೆ ವಾಚಿಸಿದರು.

ಹಿರಿಯರ ಪ್ರತಿಯೊಂದು ಆಚರಣೆ, ನಂಬಿಕೆಯ ಹಿಂದೆ ವೈಜ್ಞಾನಿಕ ಕಾರಣವಿದೆ. ಅದನ್ನು ಮೂಲರೂಪದಲ್ಲೇ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ತುಳುವರಲ್ಲಿ ಬಲಿ ಚಕ್ರವರ್ತಿಯ ಕಾಲದಿಂದಲೇ ದಾನ ಗುಣ ಮೈಗೂಡಿದೆ. ತುಳುನಾಡಿನ ಸೊಬಗಿಗೆ ಯಾವುದೇ ಸರ್ಕಾರಗಳು ಕಾರಣವಲ್ಲ. ಮುಂಬೈ ಸಹಿತ ಪರವೂರಿನಲ್ಲಿ ದುಡಿದು ಊರಿನ ಮೇಲಿನ ಅಭಿಮಾನದಿಂದ ದಾನಿಗಳು ನೀಡಿದ ಕೊಡುಗೆಯಿಂದಲೇ ಸಾಧ್ಯವಾಗಿದೆ.