ಮಂಗಳೂರು ನಗರದಲ್ಲಿ ಸುಮಾರು 500ಕ್ಕೂ ಅಧಿಕ ಸಿಟಿ ಬಸ್ಸುಗಳಿದ್ದು, ಪ್ರಸ್ತುತ ಸ್ಟೇಟ್ ಬ್ಯಾಂಕಿನಲ್ಲಿರುವ ಸರ್ವಿಸ್ ಬಸ್‍ಸ್ಟ್ಯಾಂಡಿನಲ್ಲಿ ಸುಮಾರು 4000ಕ್ಕೂ ಅಧಿಕ ಟ್ರಿಪ್‍ಗಳನ್ನು ಬಂದು ಹೋಗುತ್ತಿರುವ ಸ್ಟೇಟ್‍ಕ್ಯಾರೇಜ್ ಬಸ್, ಕೆ.ಎಸ್.ಆರ್.ಟಿ.ಸಿ ಬಸ್ಸ್, ಟು ವಿಜಿಟ್ ಬಸ್ಸುಗಳು, ವಾಹನ ತಡೆರಹಿತ ಬಸ್ಸ್‍ಗಳು, ಸುಮಾರು 800ಕ್ಕೂ ಅಧಿಕ ಬಸ್ಸುಗಳು ಈ ನಿಲ್ದಾಣದೊಳಗಡೆ ಕಾರ್ಯ ನಿರ್ವಹಿಸುತ್ತಿದ್ದು, ಅದರ ಮೇಲೆ ಸಿಟಿಸ್ಟ್ಯಾಂಡ್ ಬಸ್ಸುಗಳನ್ನು ಸರ್ವಿಸ್ ಬಸ್ ನಿಲ್ದಾಣಗಳಲ್ಲಿಯೇ ಕಾರ್ಯಚರಿಸಬೇಕೆಂಬ ಏಕಪಕ್ಷೀಯ ಮತ್ತು ಪ್ರಯಾಣಿಕರ ಮತ್ತು ಸಾರ್ವಜನಿಕರಿಗೆ ಅನಾನುಕೂಲವಾಗುವ ಬಗ್ಗೆ ದೂರುಗಳನ್ನು ಪರಿಗಣಿಸಿ, ಇಂದು ಮಾಜಿ ಶಾಸಕ, ದಕ್ಷಿಣಕನ್ನಡ ಜಿಲ್ಲಾ ಕಾರ್ಮಿಕ ಪರಿಷತ್ ಬಸ್ ನೌಕರರ ಸಂಘದ ಅಧ್ಯಕ್ಷ ಶ್ರೀ ಐವನ್ ಡಿ ಸೋಜ ಇವರು, ಸರ್ವಿಸ್ ನಿಲ್ದಾಣಕ್ಕೆ ಭೇಟಿ ಮಾಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ನಿಲ್ದಾಣವು ಪ್ರಯಾಣಿಕರಿಗೆ ಇಳಿಯಲು ಮತ್ತು ಬಸ್ ಹತ್ತಲು ಅವಕಾಶವಿರುವುದಿಲ್ಲ, ಮಾತ್ರವಲ್ಲದೇ ದಟ್ಟತೆಯ ಪಾರ್ಕಿಂಗ್‍ನಿಂದಾಗಿ ಪ್ರಯಾಣಿಕರಿಗೆ ಯಾವುದೇ ಭದ್ರತೆ ಇಲ್ಲದೇ ಅದರಲೂ,್ಲ ಮಹಿಳಾ ಪ್ರಯಾಣಿಕರಿಗೆ ಬಸ್‍ನಿಂದ ಇಳಿಯಲು ಮತ್ತು ಹತ್ತಲು ಸಾಧ್ಯವಾಗದ ಪರಿಸ್ಥಿತಿ ಇದೆ. ಶೌಚಾಲಯದ ಮೂಲಭೂತ ಸೌಕರ್ಯವಿರುವುದಿಲ್ಲ ಬದಲಾಗಿ ಮಳೆಯಿಂದಾಗಿ ನೆಲದ ಮೇಲೆ ಕಾಲಿಡಲು ಆಗದ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಬಸ್ಸ್ ಮಾಲಕರ ಮತ್ತು ಜಿಲ್ಲಾಧಿಕಾರಿಯ ತೀರ್ಮಾನ ಮಾಲಕರರಿಗೆ ಅನುಕೂಲಕ್ಕೆ ತಕ್ಕÀ್ಕ ಹೊರತು ನೌಕರರ ಪ್ರಯಾಣಿಕರ ಅನುಕೂಲಕ್ಕಾಗಿ ಅಲ್ಲ ಎಂದು ಸ್ಪಷ್ಟವಾಗುತ್ತಿದ್ದು, ರಸ್ತೆಯುದ್ದಕ್ಕೂ ರಸ್ತೆ ಬ್ಲಾಕ್ ಆಗುತ್ತಿದ್ದು, ಇದನ್ನು ಕೂಡಲೇ ಪರಿಗಣಿಸಿ, ಹಿಂದಿನ ಕ್ರಮದಲ್ಲಿ ಬಸ್ಸುಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಐವನ್ ಡಿ ಸೋಜರವರು ಒತ್ತಾಯಿಸಿದ್ದಾರೆ ಇಲ್ಲದಿದ್ದಲ್ಲಿ, ತೀವ್ರ ಪ್ರತಿಭಟನೆಗೆ ಸಜ್ಜಾಗುವುದು ಎಂದು ಎಚ್ಚರಿಸಿದ್ದಾರೆ.

ಈ ನಿಯೋಗದಲ್ಲಿ ಬಸ್ ನೌಕರರ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣ ಡಿ ಅಂಚನ್ ಕಾಟಿಪಳ್ಳ, ಜಿಲ್ಲಾ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಅತ್ತಾವರ, ಯುವ ಕಾಂಗ್ರೆಸ್ ನಾಯಕ ಹಸನ್ ಪಳ್ನೀರ್, ಬಸ್ ನೌಕರ ಪದಾಧಿಕಾರಿ ಗಣೇಶ್, ಯಾದವ ಪೂಜಾರಿ, ಕೇಶವ ಬಲ್ಲಾಳ್ ಬಾಗ್, ರಿಯಾಜ್ ಕಾಟಿಪಳ್ಳ, ಶರಣ್ ಶೆಟ್ಟಿ, ವಿಕಾಸ್ ಶೆಟ್ಟಿ ವಾಲ್ಟರ್ ಡಿ ಸೋಜ ಮತ್ತು ಇತರ ಬಸ್ ಚಾಲಕ/ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.