ಮರವೂರು ಸೇತುವೆ ಕುಸಿತದಿಂದಾಗಿ ಕಟೀಲು, ಬಜ್ಪೆ, ವಿಮಾನ ನಿಲ್ದಾಣಕ್ಕೆ ತೆರಳಲು ಅನಾನುಕೂಲವಾಗಿದ್ದು, ಮಾತ್ರವಲ್ಲದೇ ರಸ್ತೆಯ ಅಗಲೀಕರಣ ಇಲ್ಲದೇ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದನ್ನು ಪರಿಗಣಿಸಿ, ಇಂದು  ವಿಧಾನ ಪರಿಷ್ತಿನ ಮಾಜಿ ಶಾಸP, ಎಐಸಿಸಿ ಕಾರ್ಯದರ್ಶಿ ಶ್ರೀ ಐವನ್ ಡಿ ಸೋಜರವರ ನೇತೃತ್ವದಲ್ಲಿ ಎಸ್.ಇ.ಜೆಡ್ ನ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಶ್ರೀನಿವಾಸನ್ ಮತ್ತು ಇತರ ಅಧಿಕಾರಿಗಳನ್ನು ಅವರ ಎಸ್.ಇ.ಜೆಡ್ ಕಚೇರಿಯಲ್ಲಿ ಭೇಟಿ ಮಾಡಿ, ಮರವೂರು ಬ್ರಿಡ್ಜ್ ಸಂಪೂರ್ಣಗೊಳ್ಳುವವರೆಗೆ ಎಸ್.ಇ.ಜೆಡ್ ನ ಮೇಲ್ ಸೇತುವೆ ಮೂಲಕ ಅವರ ಕಾಸಗಿ ರಸ್ತೆ ಬಳಸಿ, ಬಜ್ಪೆ ವಿಮಾನ ನಿಲ್ದಾಣ, ಕಟೀಲು, ಕೈಕಂಬ, ಕಿನ್ನಿಗೊಳಿ ಹತ್ತಿರದ ಸಂಪರಕವಾಗುತ್ತಿರುವ ಎಸ್.ಇ.ಜೆಡ್ ರಸ್ತೆ ಬಳಕೆ ಮಾಡಲು ಎಲ್ಲರಿಗೂ ಅನುಮತಿ ನೀಡಬೇಕೆಂದು ಬೇಡಿಕೆಯನ್ನು ಸಲ್ಲಿಸಿ, ಈ ಬೇಡಿಕೆಯನ್ನು ಕಾರ್ಯನಿರ್ವಹಣಾಧಿಕಾರಿ ಶ್ರೀ ಶ್ರೀನಿವಾಸನ್ ರವರು ಒಪ್ಪಿಗೆ ಸೂಚಿಸಿದ್ದಾರೆ. ಇದರಿಮ್ದ ಇನ್ನು ಜೋಕಟ್ಟೆ ಮಾರ್ಗವಾಗಿ ಹೋಗುವ ಬದಲು ಕಳವಾರು ಆಗಿ ಎಸ್.ಇ.ಜೆಡ್ ರಸ್ತೆ ಮೂಲಕ ವಿಮಾನ ನಿಲ್ದಾಣ ಮತ್ತು ಇನ್ನಿತರ ಪ್ರದೇಶಕ್ಕೆ ಸಂಪರ್ಕ ಮಾಡಲು ಸಾಧ್ಯವಾಗುವುದು ಎಂದು ಶ್ರೀ ಐವನ್ ಡಿ ಸೋಜರವರು ತಿಳಿಸಿದ್ದಾರೆ. ಈ ತೀರ್ಮಾನವು ಪ್ರಯಾಣಿಕರಿಗೆ ಹೆಚ್ಚಿಗೆ ಅನುಕೂಲವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಕೃತಜ್ಞತೆ ಸೂಚಿಸಿದ್ದಾರೆ.

ಈ ನಿಯೋಗದಲ್ಲಿ ಬಸ್ ನೌಕರರ ಕಾರ್ಯದರ್ಶಿ ಶ್ರೀ ಕೃಷ್ಣ ಡಿ ಅಂಚನ್ ಕಾಟಿಪಳ್ಳ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಅತ್ತಾವರ, ಯುವ ಕಾಂಗ್ರೆಸ್ ನಾಯಕ ಹಸನ್ ಪಳ್ನೀರ್, ಬಸ್ ನೌಕರ ಪದಾಧಿಕಾರಿ ಗಣೇಶ್, ಯಾದವ ಪೂಜಾರಿ, ಕೇಶವ ಬಲ್ಲಾಳ್ ಬಾಗ್, ರಿಯಾಜ್ ಕಾಟಿಪಳ್ಳ, ಶರಣ್ ಶೆಟ್ಟಿ, ವಿಕಾಸ್ ಶೆಟ್ಟಿ ವಾಲ್ಟರ್ ಡಿ ಸೋಜ ಮತ್ತು ಇತರ ಬಸ್ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.