ಮರವೂರು ಬ್ರಿಡ್ಜ್ ಕುಸಿತದಿಂದ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಕುಸಿತಗುಂಟಾದ ಸೇತುವೆಯನ್ನು ಪುನರ್ ನಿರ್ಮಿಸಿ, ಆಯುಕ್ತರಿಗೆ ಲಘು ವಾಹನಗಳ ಮೂಲಕ ಸಂಚಾರಿಸಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಲಾಗಿದ್ದು, ಅದರ ಕಾಮಾಗಾರಿ ಅನೇಕ ದಿನಗಳಿಂದ ನಡೆಯುತ್ತಿದ್ದು, ಇನ್ನೂ ಪೂರ್ಣಗೊಳ್ಳದಿಂದಾಗಿ  ವಿಧಾನ ಪರಿಷ್ತಿನ ಮಾಜಿ ಶಾಸಕ, ಎಐಸಿಸಿ ಕಾರ್ಯದರ್ಶಿ ಶ್ರೀ ಐವನ್ ಡಿ ಸೋಜರವರು ಇಂದು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಇಂಜಿನಿಯರ್ ಸುಬ್ರಹ್ಮಣ್ಯ ಮತ್ತು ಕಂಟ್ರಾಕ್ಟರ್ ಜೊತೆ ಕಾಮಾಗಾರಿಯನ್ನು ವೀಕ್ಷಿಸಿದರು. 

ಸದ್ರಿ ಸೇತುವೆಯ ಕಾಮಾಗಾರಿಯು ಇನ್ನು 8 ದಿವಸದೊಳಗೆ ಪೂರ್ಣಗೊಳ್ಳಲ್ಲಿದ್ದು, ನಂತರ ತಾಂತ್ರಿಕ ತಂಡದ ಅಭಿಪ್ರಾಯ ಪಡೆದು, 15 ದಿವಸಗೊಳಗೆ ಪ್ರಯಾಣಿಕರಿಗೆ ಪ್ರಯಾಣಿಸಲು ಅನುಕೂಲವಾಗುವ ರೀತಿಯಲ್ಲಿ ಸೇತುವೆಯನ್ನು ಪುನರ್ ನಿರ್ಮಿಸುವುದಾಗಿ ಇಂಜಿನಿಯರ್ ತಿಳಿಸಿದ್ದಾರೆ. ಕಾಮಾಗಾರಿ ತೀವ್ರಗತಿಯಲ್ಲಿ ನಡೆಯುತ್ತುದ್ದು, ಆದಷ್ಟು ಬೇಗ ಕಾಮಾಗಾರಿ ಪೂರ್ಣಗೊಳಿಸಬೇಕೆಂದು ಲೋಕೋಪಯೋಗಿ ಜಿಲ್ಲಾಧಿಕಾರಿಯವರಿಗೆ ತಿಳಿಸಿದರು ಅಲ್ಲದೇ, ಜೋಕಟ್ಟೆ ಮೂಲಕ ಹಾದುಹೋಗುವ gಸ್ತೆಯು ತೀವ್ರ ಹದೆಗೆಟ್ಟಿದ್ದು, ಈ ರಸ್ತೆಯನ್ನು ಆದ್ಯತೆ ಮೇರೆಗೆ ಸರಿಪಡಿಸಬೇಕೆಂದು ಐವನ್ ಡಿ ಸೋಜರವರು ಅಧಿಕಾರಿಗಳಿಗೆ ವಿನಂತಿಸಿದರು.