ಗೋಕಾಕ ಶಾಸಕ ಬಿಜೆಪಿಯ ರಮೇಶ್ ಜಾರಕಿಹೊಳಿ ಅವರು ತಮ್ಮ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯ ಕಾಂಗ್ರೆಸ್ ನಾಯಕ ಶ್ಯಾಮ್ ಘಾಟಗೆ ಮನೆಯಲ್ಲಿ ಮಾತುಕತೆ ನಡೆಸಿದ್ದು ರಾಜಕೀಯ ಕುತೂಹಲಕ್ಕೆ ದಾರಿ ಮಾಡಿದೆ.

ಕುಡಚಿಯ ಬಿಜೆಪಿ ಶಾಸಕ ಪಿ. ರಾಜೀವ ತಮ್ಮಿಂದ ಅಂತರ ಕಾಯ್ದುಕೊಳ್ಳುವದನ್ನು ಕಂಡು ಬೇಸರಸಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕನ ಮನೆಗೆ ಹೋಗಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಬಿಜೆಪಿ ಶಾಸಕ ರಾಜೀವರ ರಾಜಕೀಯ ವಿರೋಧಿಯಾದ ಶ್ಯಾಮ್ ಘಾಟಗೆಯವರು ಇದೊಂದು ಸೌಹಾರ್ದ ಭೇಟಿ. ಮುಖ್ಯವಾಗಿ ನಾವು ಕಡಿಮೆ ವೆಚ್ಚದಲ್ಲಿ ಹೆಚ್ಚು ‌ಇಳುವರಿ ನೀಡುವ ಕಬ್ಬು ಬೆಳೆಯುವ ಬಗೆಗೆ ಮಾತನಾಡಿದೆವು ಎಂದಿದ್ದಾರೆ.