ಮಂಗಳೂರು, ಮಾರ್ಚ್ 29: ಲಜ್ಜೆಗೇಡಿ ರಮೇಶ್ ಜಾರಕಿಹೊಳಿ ರಕ್ಷಿಸುತ್ತಿರುವ ಬಿಜೆಪಿ, ಒಂದು ಹೆಣ್ಣನ್ನು ರಕ್ಷಿಸಲಾಗದ ಬಿಜೆಪಿ ಸರಕಾರಗಳಿಗೆ ದೇಶದ 60 ಕೋಟಿ ಮಹಿಳೆಯರನ್ನು ರಕ್ಷಿಸುವ ಯೋಗ್ಯತೆ ಇಲ್ಲ ಕಾಂಗ್ರೆಸ್ ಮಂಗಳೂರು ಘಟಕದವರು ತಾಲೂಕು ಪಂಚಾಯತ್ ಕಚೇರಿಯೆದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ
ಪ್ರಾಸ್ತಾವಿಕ ಪ್ರಕಾಶ್ ಸಾಲಿಯಾನ್
ಮೋದಿ ಎಲ್ಲಿದ್ದೀರಿ?
ಕಳ್ಳ ಹಾದಿಯ ಸರಕಾರಕ್ಕೆ ನೈತಿಕತೆ ಎಲ್ಲಿರುತ್ತದೆ? ಗಣೇಶ್
ರಮೇಶ್ ಜಾರಕಿಹೊಳಿ ಬಂಧಿಸಿ, ಬಿಜೆಪಿ ಇಳಿಸಿ
ನಾಚಿಕೆಗೇಡು ಜನರನ್ನು ರಕ್ಷಿಸುವ ಅಗತ್ಯ ಯಡಿಯೂರಪ್ಪರಿಗೆ ಏನಿದೆ? ಮೊಹಮ್ಮದ್ ಕುಂಜತ್ತಬೈಲ್
ಶೋಭಾ ದೂರಾದ ಮೇಲೆ ವಿರಹಿಯಾದ ಯಡಿಯೂರಪ್ಪರ ಆಲಾಪವಿದು- ಮಾಜೀ ಉಪ ಮೇಯರ್ ರಜನೀಶ್
ದೇಶದ ಮೋದಿ ಸರಕಾರ ಮತ್ತು ರಾಜ್ಯದ ಯಡಿಯೂರಪ್ಪ ಸರಕಾರ ಎರಡೂ ಜನವಿರೋಧಿ ಮತ್ತು ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿವೆ. ರಾಜ್ಯದಲ್ಲಿ ಬಿಜೆಪಿ ಗೆದ್ದಿರಲಿಲ್ಲ. ರಮೇಶ್ ಜಾರಕಿಹೊಳಿ ಮತ್ತು 16 ಜನರಿಗೆ ಲಂಚ ಮಂಚ ನೀಡಿ ಅಡ್ಡ ಹಾದಿಯ ಸರಕಾರ ರಚಿಸಲಾಗಿದೆ. ಆ ಲಂಚ ಮಂಚದ ಹೊಸ ಅಧ್ಯಾಯ ಲೈಂಗಿಕ ಸಿಡಿ ಪ್ರಕರಣ. ಇವರಿಂದಾಗಿ ಸಂಸಾರಸ್ಥರು, ನಾವೆಲ್ಲ ತಲೆ ಎತ್ತಿ ತಿರುಗದಂತಾಗಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದವರು ಅಭಿಪ್ರಾಯ ಹೊರಗಿಟ್ಟರು.
ಕಾಂಗ್ರೆಸ್ ಮಂಗಳೂರು ನಗರ ಘಟಕದ ಅಧ್ಯಕ್ಷರಾದ ಪ್ರಕಾಶ್ ಸಾಲಿಯಾನ್ ಅಧ್ಯಕ್ಷತೆಯಲ್ಲಿ ಪ್ರತಿಭಟನೆ ನಡೆಯಿತು. ಕಾರ್ಪೊರೇಟರ್ ವಿನಯರಾಜ್, ಮಾಜೀ ಮೇಯರ್ ಜೆಸಿಂತಾ ಆಲ್ಫ್ರೆಡ್, ಟಿ. ಕೆ. ಸುಧೀರ್, ಶಾಂತಲಾ ಗಟ್ಟಿ, ನಮಿತಾ ಡಿ. ರಾವ್, ರೂಪಾ ಚೇತನ್, ವಿಶ್ವಾಸ್ ದಾಸ್, ಸಲೀಂ, ಲಾರೆನ್ಸ್ ಡಿಸೋಜಾ ಮೊದಲಾದವರು ಪ್ರತಿಭಟನೆಯಲ್ಲಿ ಹಾಜರಿದ್ದರು.