ಪುತ್ತೂರು: ಎನ್ ಎಸ್ ಯುಐ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಪುತ್ತೂರು ತಾಲೂಕು ಘಟಕದ ವತಿಯಿಂದ ‘ಸಂವಿಧಾನದಡೆಗೆ, ವಿದ್ಯಾರ್ಥಿಗಳ ನಡೆ’ ಜಿಲ್ಲಾ ಮಟ್ಟದ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಪುತ್ತೂರಿನ ಹಿಂದುಸ್ಥಾನ್ ಸಭಾಂಗಣದಲ್ಲಿ ನಡೆಯಿತು.
ಈ ವೇಳೆ ವಿದ್ಯಾರ್ಥಿಗಳಿಗೆ ವಿಚಾರಗೋಷ್ಠಿ ನಡೆಸಿ ಸಂವಿಧಾನ ಓದು ಪುಸ್ತಕ ವಿತರಿಸಲಾಯಿತು. ಬಳಿಕ 6 ಕಾಲೇಜುಗಳಲ್ಲಿ ನೂತನ ಘಟಕಗಳನ್ನು ಘೋಷಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಮೆರಿಲ್ ರೇಗೋ, ಜಿಲ್ಲಾ ಎನ್ ಎಸ್ ಯುಐ ಅಧ್ಯಕ್ಷ ಸವಾದ್ ಸುಳ್ಯ, ಕೆಪಿಸಿಸಿ ಸದಸ್ಯ ಸಂತೋಷ್, ಸಾಮಾಜಿಕ ಕಾರ್ಯಕರ್ತ ಗಣೇಶ್ ಮೂಲ್ಕಿ, ಬಾತೀಷ್ ಅಳಕೆಮಜಲು, ಉಪಾಧ್ಯಕ್ಷ ಪವನ್ ಸಾಲ್ಯಾನ್, ಪುತ್ತೂರು ವಿಧಾನಸಭಾ ಕ್ಷೇತ್ರ ಎನ್ ಎಸ್ ಯುಐ ಅಧ್ಯಕ್ಷ ಕೌಶಿಕ್ ಗೌಡ, ಶ್ರೀನಿವಾಸ್ ಕಾಲೇಜು ಎನ್ ಎಸ್ ಯುಐ ಅಧ್ಯಕ್ಷ ತಮೀಝ್ ಕೋಲ್ಪೆ, ಪುತ್ತೂರು ಎನ್ ಎಸ್ ಯುಐ ಅಧ್ಯಕ್ಷ ಝೈನ್ ಆತೂರು ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.