ಮಂಗಳೂರು,ಫೆ. 13:  ಬೆಂಗಳೂರಿನ ಜನ ಆರೋಗ್ಯ ಸಂಸ್ಥೆ ಎಪಿಡೀಮಿಯಾಲಜಿ ವಿಭಾಗ, ನಿಮಾನ್ಸ್‍ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಹಾಗೂ ರಾಜ್ಯ ಸರ್ಕಾರದ ಅನುದಾನಿತ ಯೋಜನೆಯಾದ “ ಯುವಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಯುವ ಸ್ಪಂದನ ಸೇವೆಗಳ ಸಮಗ್ರ ಅಭಿವೃದ್ದಿ ಮತ್ತು  ಅನುಷ್ಠಾನ ಯೋಜನೆ ” ಯುವ ಸ್ಪಂದನ ಅಡಿಯಲ್ಲಿ ಯುವ ಪರಿವರ್ತಕರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ. 

ಅರ್ಹತಾ ಮಾನದಂಡಗಳು: ಜಿಲ್ಲೆಗೆ ಯುವ ಪರಿವರ್ತಕರ ಸಂಖ್ಯೆ : ಕನಿಷ್ಠ 5 (ತಾಲೂಕಿಗೆ ಒಬ್ಬರಂತೆ) ( ಬಂಟ್ವಾಳ, ಸುಳ್ಯ, ಬೆಳ್ತಂಗಡಿ, ಮಂಗಳೂರು ಮತ್ತು ಮುಲ್ಕಿ-ಮೂಡಬಿದ್ರೆ ತಾಲೂಕು). ಪದವಿ ಹಾಗೂ ಮೇಲ್ಪಟ್ಟು(Psychology/Social Work ಪದವಿ ತೇರ್ಗಡೆ ಹೊಂದಿದವರಿಗೆ ಆದ್ಯತೆ ನೀಡಲಾಗುತ್ತದೆ.) ಕನಿಷ್ಠ ವಯಸ್ಸು : 21 ರಿಂದ 35 ವರ್ಷಗಳು.

ಕೌಶಲ್ಯ:-ಸ್ಥಳೀಯ ಭಾಷೆ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದು ಅವಶ್ಯಕ. ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಹುಮ್ಮಸ್ಸನ್ನು ಹಾಗೂ ಉತ್ತಮ ಅಂತ ವ್ರ್ಯಕ್ತೀಯ, ಸಂವಹನ ಕೌಶಲ್ಯದ ಜೊತೆಗೆ ಸಂವಾದ ಕೌಶಲ್ಯಗಳನ್ನು ಹೊಂದಿರಬೇಕು. ಸಮುದಾಯದಲ್ಲಿ ಯುವಜನರಿಗೆ ತರಬೇತಿಯಂತಹ ಕಾರ್ಯಕ್ರಮಗಳನ್ನು ನಡೆಸುವುದು ಅವಶ್ಯವಿರುತ್ತದೆ.

ಅನುಭವ:- ಯುವಜನರ ವಿಷಯಗಳ ಕುರಿತು ಸಮುದಾಯದಲ್ಲಿ ಕೆಲಸ ಮಾಡಿರುವವರನ್ನು, ಮಾರ್ಗದರ್ಶನ/ಆಪ್ತ ಸಮಾಲೋಚನೆಯನ್ನು ಒದಗಿಸುವ ಕೌಶಲ್ಯವನ್ನು ಹೊಂದಿರಬೇಕು. ಅರ್ಜಿ ಸಲ್ಲಿಸುವವರು ತಮ್ಮ ವೈಯಕ್ತಿಕ ವಿವರಗಳನ್ನು ಬಿಳಿ ಹಾಳೆಯಲ್ಲಿ ತಮ್ಮ ಸಂಪೂರ್ಣ ವಿವರಗಳೊಂದಿಗೆ ಫೆಬ್ರವರಿ 25 ರ ಒಳಗಾಗಿ ಮಂಗಳೂರು ಮಂಗಳಾ ಕ್ರೀಡಾಂಗಣದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯನ್ನು  ಸಂಪರ್ಕಿಸಬಹುದು ಎಂದು ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.