ಮಂಗಳೂರು, ಮೇ 22:  ಸಿ.ಐ.ಎಸ್.ಎಫ್ ಸಿಬ್ಬಂದಿ ಗೀತಾ ಸಮೋಟಾ ಅವರು ಮೌಂಟ್ ಎವರೆಸ್ಟ್ ತುತ್ತತುದಿ ತಲುಪಿದ ಕೇಂದ್ರೀಯ  ಭದ್ರತಾ ಪಡೆ (ಸಿ.ಐ.ಎಸ್.ಎಫ್) ಯ ಪ್ರಪ್ರಥಮ ಸಿಬ್ಬಂದಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಮೌಂಟ್ ಎವರೆಸ್ಟ್  ಪರ್ವತದ ತುತ್ತತುದಿ 8,849  ಮೀಟರ್ ಎತ್ತರವನ್ನು ಇವರು ತಲುಪಿದ್ದಾರೆ ಎಂದು ಸಿ.ಐ.ಎಸ್.ಎಫ್ ಪ್ರಕಟಣೆ ತಿಳಿಸಿದೆ.