ಮಂಗಳೂರು: ಮೈ ಭಾರತ್, ಯುವಜನ ಕ್ರೀಡಾ ಮತ್ತು ಕ್ರೀಡಾ ಸಚಿವಾಲಯ, ಮೂಡುಶೆಡ್ಡೆ ಗ್ರಾಮ ಪಂಚಾಯತ್, ಬೆಸೆಂಟ್ ವಿಮೆನ್ಸ್ ಕಾಲೇಜು ಮಂಗಳೂರು ಮತ್ತು ಕಾವೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್ ಮತ್ತು ರೆಡ್ ಕ್ರಾಸ್ ಸ್ವಯಂಸೇವಕರ ಸಹಯೋಗದಲ್ಲಿ ಸ್ವಚ್ಛತೆಯೇ ಸೇವೆ  ಅಭಿಯಾನವನ್ನು ಮೂಡುಶೆಡ್ಡೆ ಗ್ರಾಮ ಪಂಚಾಯತ್‍ನಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಮೂಡುಶೆಡ್ಡೆ ಗ್ರಾಮ ಪಂಚಾಯತ್ ಪಿಡಿಒ ಜಯಪ್ರಕಾಶ್ ಉದ್ಘಾಟಿಸಿ, ಸ್ವಚ್ಛ ಭಾರತ್ ಚಟುವಟಿಕೆಗಳಲ್ಲಿ ಯುವಕರ ಭಾಗವಹಿಸುವಿಕೆಯ ಮಹತ್ವವನ್ನು ತಿಳಿಸಿದರು. 

ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ ಮಾತನಾಡಿ,  ಸರ್ಕಾರವು ಸ್ವಚ್ಛ ಭಾರತ್ ಗುರಿ ಸಾಧಿಸಲು ಗರಿಷ್ಠ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದರು. ವಿಶೇಷವಾಗಿ ಯುವಜನ ಕ್ರೀಡಾ ಮತ್ತು ಕ್ರೀಡಾ ಸಚಿವಾಲಯವು ರಾಷ್ಟ್ರದ ಯುವ ಮನಸ್ಸುಗಳನ್ನು ಪ್ರೋತ್ಸಾಹಿಸುತ್ತಿದೆ. ಕಾಲೇಜು ಶಿಕ್ಷಣದ ಜೊತೆಗೆ ಸಮುದಾಯ ಚಟುವಟಿಕೆಗಳಲ್ಲಿ ಯುವಕರ ಭಾಗವಹಿಸುವಿಕೆಯ ಮಹತ್ವ, ಸ್ವಯಂಸೇವಾ ಭಾಗವಹಿಸುವಿಕೆಯ ಮೂಲಕ ಸಮುದಾಯ ಅಭಿವೃದ್ಧಿಗೆ ಕೊಡುಗೆ ನೀಡುವುದರ ಮಹತ್ವವನ್ನು ತಿಳಿಸಿದರು.

ಈ ಅಭಿಯಾನದಲ್ಲಿ ಗ್ರಾಮ ಪಂಚಾಯತ್‍ನ  ರಸ್ತೆಗಳ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ ಮತ್ತು ಏಕ ಬಳಕೆ ಪ್ಲಾಸ್ಟಿಕ್ ಸಂಗ್ರಹಣೆಯನ್ನು ನಡೆಸಲಾಯಿತು.

ಜಗದೀಶ್ ಕೆ, ಬೆಸೆಂಟ್ ಕಾಲೇಜುಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ರವಿ ಪ್ರಭಾ,ಜಿಎಫ್‍ಜಿಸಿ ಕಾವೂರು ಸಂತೋಷ್ ಪಿಂಟೋ, ಗ್ರಾಮ ಪಂಚಾಯತ್ ಸದಸ್ಯರು ಹಾಜರಿದ್ದರು.