ಮಂಗಳೂರು, ಅ.28: ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದಾಖಲಾದ ಪ್ರಕರಣಗಳಲ್ಲಿ 2016 ರ ಜನವರಿ 1 ರಿಂದ 2020ರ ಡಿಸೆಂಬರ್  31 ರ  ಅವಧಿಯಲ್ಲಿ ಇತ್ಯರ್ಥವಾಗಿರುವ ಪ್ರಕರಣಗಳ ಕಡತಗಳನ್ನು ನಾಶಪಡಿಸುತ್ತಿರುವುದರಿಂದ, ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಆಯೋಗ, ರಾಷ್ಟ್ರೀಯ ಆಯೋಗ, ಕರ್ನಾಟಕದ ಘನ ಉಚ್ಚ ನ್ಯಾಯಾಲಯ ಮತ್ತು ಭಾರತ ಸರ್ವೋಚ್ಚ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿದ್ದು ಅಥವಾ ತಡೆಯಾಜ್ಞೆ ಇದ್ದರೆ, ಪ್ರಕರಣಗಳ ಮಾಹಿತಿಯನ್ನು ಈ ಕಛೇರಿಗೆ ನೀಡಬೇಕು.

ದೂರುದಾರರು/ಎದುರುದಾರರು/ವಕೀಲರು ನವೆಂಬರ್ 27 ರೊಳಗೆ ಮೇಲ್ಕಂಡ ಅವಧಿಯ ಪ್ರಕರಣಗಳಲ್ಲಿ ಯಾವುದಾದರೂ ದಾಖಲಾತಿಗಳು, ಆದೇಶಗಳು ಮತ್ತು ಇತರ ದಾಖಲೆಗಳ ದೃಢೀಕೃತ ಪ್ರತಿಗಳು ಬೇಕಿದ್ದಲ್ಲಿ ಪಡೆದುಕೊಳ್ಳಲು ಮತ್ತು ಮೂಲದಾಖಲಾತಿಗಳಿದ್ದಲ್ಲಿ ವಾಪಾಸ್ಸು ಪಡೆಯಲು ಸೂಚಿಸಿದೆ. ನವೆಂಬರ್ 27ರ ನಂತರ ಕಡತಗಳನ್ನು ಕಡ್ಡಾಯವಾಗಿ ನಾಶಗೊಳಿಸಲು ಕ್ರಮವಹಿಸಲಾಗುತ್ತದೆ ಎಂದುದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರು(ಪ್ರಭಾರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.