ಮಂಗಳೂರು: ಜಿ.ಟಿ.ಟಿ.ಸಿ ಮಂಗಳೂರು ಕೇಂದ್ರದಲ್ಲಿ 2025-26ನೆ ಸಾಲಿನ “ತಂತ್ರಜ್ಞಾನ ತರಬೇತಿ ಸಂಸ್ಥೆಗಳ ನೆರವು ಯೋಜನೆ, ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ” ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಸಿ.ಎನ್.ಸಿ. ಪ್ರೊಗ್ರಾಮರ್, ಲೇತ್ ಆಪರೇಟರ್, ಮಿಲ್ಲಿಂಗ್ ಮೆಶಿನ್ ಆಪರೇಟರ್, ಸರ್ಫೇಸ್ ಗ್ರೈಂಡಿಂಗ್ ಆಪರೇಟರ್, ಮೆಕಾನಿಕಲ್ ಡಿಸೈನರ್ 4 ತಿಂಗಳ ಸರ್ಟಿಫಿಕೆಟ್ ಕೋರ್ಸ್‍ಗಳಿಗೆ ಅರ್ಜಿಆಹ್ವಾನಿಸಲಾಗಿದೆ.
ಈ ಕೋರ್ಸ್‍ಗೆ 10 ನೇ ತರಗತಿ ಪಾಸ್ ಅಥವಾ ಐಟಿಐ ಪಾಸ್/ಫೇಲ್ ಅಥವಾ ಡಿಪ್ಲೊಮೊ ಪಾಸ್/ಫೇಲ್ ಹಾಗೂ ಇಂಜಿನಿಯರಿಂಗ್ ಪಾಸ್/ಫೇಲ್‍ಆದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೋರ್ಸ್‍ಗಳು ಉಚಿತವಾಗಿದ್ದು, ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 2500 ಸ್ಟೈಪೆಂಡ್ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ನಗರದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದ ಜಿ.ಟಿ.ಟಿ.ಸಿ ಕೇಂದ್ರವನ್ನು (ದೂ.ಸಂ : 8073208137, 7899070548, 9481265587)ಸಂಪರ್ಕಿಸಬಹುದು ಎಂದು ಜಿ.ಟಿ.ಟಿ.ಸಿಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.