ಮಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಸುದ್ದಿ ಛಾಯಾಚಿತ್ರ ಗ್ರಾಹಕರಿಗಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನದ ಕೊನೆಯ ದಿನಾಂಕವನ್ನು ಫೆಬ್ರವರಿ 20 ರವರೆಗೆ ವಿಸ್ತರಿಸಲಾಗಿದೆ.
ಈ ಮೊದಲು ಛಾಯಾಚಿತ್ರಗಳನ್ನು ಕಳುಹಿಸಲು ಫೆಬ್ರವರಿ 15 ಕೊನೆ ದಿನಾಂಕವಾಗಿತ್ತು. ಉಳಿದಂತೆ ಸ್ಪರ್ಧೆಯ ನಿಯಮ ಸೇರಿದಂತೆ ಯಾವುದರಲ್ಲೂ ಬದಲಾವಣೆ ಮಾಡಿಲ್ಲ. ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಮೊದಲ ಮೂರು ಛಾಯಾಚಿತ್ರಗಳಿಗೆ ಕ್ರಮವಾಗಿ 35,000/- ರೂ. 25,000/- ರೂ. ಹಾಗೂ 15,000/- ರೂ. ನಗದು ಬಹುಮಾನ ನೀಡಲಾಗುವುದು. ಆಯ್ದ ಅತ್ಯುತ್ತಮ ಛಾಯಾಚಿತ್ರಗಳನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಮಾರ್ಚ್ ತಿಂಗಳಲ್ಲಿ ಅಕಾಡೆಮಿ ವತಿಯಿಂದ ಏರ್ಪಡಿಸಲಾಗುವ ಸುದ್ದಿ ಛಾಯಾಗ್ರಹಣ ಕುರಿತ ಕಾರ್ಯಾಗಾರದ ಸಂದರ್ಭದಲ್ಲಿ ಛಾಯಾಚಿತ್ರ ಪ್ರದರ್ಶನದಲ್ಲಿ ಇರಿಸಲಾಗುವುದು.
ಸ್ಪರ್ಧೆಯಷರತ್ತುಗಳು:- ಈ ಸ್ಪರ್ಧೆಗೆ ಪ್ರವೇಶ ಉಚಿತವಾಗಿದ್ದು, 2024 ರಜನವರಿ 1 ರಿಂದ 2025 ಜನವರಿ 31 ರ ಅವಧಿಯಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಸ್ವೀಕರಿಸಲಾಗುವುದು. ಪ್ರತಿ ಸುದ್ದಿ ಛಾಯಾಚಿತ್ರಗ್ರಾಹಕರು ತಾವೇ ಚಿತ್ರಿಸಿರುವ ಎರಡು ಸುದ್ದಿ ಛಾಯಾಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಸಲ್ಲಿಸಬಹುದು.
ಸುದ್ದಿ ಛಾಯಾಚಿತ್ರಗಳನ್ನು ಚಿತ್ರಿಸಿರುವುದಕ್ಕೆಯಾವುದೇ ಭೌಗೋಳಿಕ ಪರಿಮಿತಿ ಇರುವುದಿಲ್ಲ.
ಪ್ರತಿಸ್ಪರ್ಧಿಯೂ ಅವರು ಸುದ್ದಿಛಾಯಾ ಚಿತ್ರಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಯ ಸಂಪಾದಕರಿಂದ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೃಢೀಕರಣ ಪತ್ರ ಅಥವಾ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಕರ್ತರಿಗಾಗಿ ನೀಡುವ ಮಾನ್ಯತಾ ಕಾರ್ಡ್ ಹೊಂದಿರುವವರು ಅದರ ದೃಢೀಕೃತ ಪ್ರತಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು.
ಛಾಯಾಚಿತ್ರಗಳ ಮೇಲೆ ಹೆಸರು, ಶೀರ್ಷಿಕೆ ಹಾಗೂ ವಾಟರ್‍ಮಾರ್ಕ್‍ಗಳು ಇರಬಾರದು.
ಸ್ಪರ್ಧೆಗೆ ಕಳಿಸುವ ಛಾಯಾಚಿತ್ರಗಳ ಅಂದರೆ ಡಿಜಿಟಲ್ ಇಮೇಜ್‍ಗಳನ್ನು JPEG format ನಲ್ಲಿ ಮಾತ್ರ ಸಲ್ಲಿಸಬೇಕು.
ಪ್ರದರ್ಶನಕ್ಕೆಆಯ್ಕೆಯಾಗುವ ಛಾಯಾಚಿತ್ರಗಳನ್ನು20''x 30'' ಅಳತೆಯಲ್ಲಿ ಮುದ್ರಣ ಮಾಡಿಸಬೇಕಾಗಿರುವುದರಿಂದ ನೀವು ಕಳಿಸುವ ಇಮೇಜ್ ಗಳು 20''x 30'' ಅಳತೆಯ,300DPI ನಲ್ಲಿದ್ದು ಕನಿಷ್ಠ 5MB ಗಾತ್ರದಲ್ಲಿರಬೇಕು.
ಮೊಬೈಲ್‍ಕ್ಯಾಮೆರಾದಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಸ್ಪರ್ಧೆಗೆ ಸ್ವೀಕರಿಸಲಾಗುವುದಿಲ್ಲ.
ಸ್ಪರ್ಧೆಯಲ್ಲಿ ಭಾಗವಹಿಸುವ ಸುದ್ದಿಛಾಯಾಚಿತ್ರಗಳು ಸಹಜವಾಗಿರಬೇಕು. ಚಿತ್ರದಲ್ಲಿನ ಯಾವುದೇ ಭಾಗವನ್ನು ತೆಗೆಯುವುದಾಗಲಿ ಅಥವಾ ಸೇರಿಸುವುದಾಗಲಿ ಮಾಡಿರಬಾರದು.
ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಛಾಯಾಗ್ರಾಹಕರು mediaacademy.karnataka.gov.in ವೆಬ್‍ಸೈಟ್‍ನಲ್ಲಿ ಇರುವ ನಿಗದಿತ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿಮಾಡಿ, ತಮ್ಮ ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ photo.karnatakamediaacademy@gmail.com ಇ-ಮೇಲ್ ವಿಳಾಸಕ್ಕೆ ಫೆಬ್ರವರಿ 20 ರೊಳಗೆ ಸಂಜೆ 5 ಗಂಟೆ ಒಳಗಾಗಿ ಸಲ್ಲಿಸಬೇಕು. ನಂತರ ಬಂದ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
ಸ್ಪರ್ಧೆಗೆ ಬಂದಿರುವ ಛಾಯಾಚಿತ್ರಗಳನ್ನು ಪ್ರಶಸ್ತಿಗೆ ಹಾಗೂ ಪ್ರದರ್ಶನಕ್ಕೆ ಆಯ್ಕೆಮಾಡಲು ಸುದ್ದಿ ಛಾಯಾಗ್ರಹಣ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಮೂವರು ತೀರ್ಪುಗಾರರಿದ್ದು ಅವರು ತೆಗೆದುಕೊಂಡ ತೀರ್ಮಾನವೇ ಅಂತಿಮವಾಗಿರುತ್ತದೆ.
ಪ್ರಶಸ್ತಿಗೆ ಆಯ್ಕೆಯಾದ ಮೂರು ಛಾಯಾಚಿತ್ರಗಳಿಗೆ ಪ್ರಥಮ ಬಹುಮಾನ: ರೂ.35,000/ ದ್ವಿತೀಯ ಬಹುಮಾನ: ರೂ. 25000, ಹಾಗೂ ತೃತೀಯ ಬಹುಮಾನ: ರೂ.15000ಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಮೊಬೈಲ್‍ಸಂಖ್ಯೆ 9448227768 ಹಾಗೂ 9449245980 ಸಂಪರ್ಕಿಸಬಹುದು ಎಂದು ಕಾರ್ಯದರ್ಶಿ ಸಹನಾ ಎಂ. ಕಟಣೆಯಲ್ಲಿ ತಿಳಿಸಿದ್ದಾರೆ.