ಮಣಿಪುರದಲ್ಲಿ ಬುಡಕಟ್ಟು ಜನರು ನಡೆಸಿರುವ ಹಿಂಸಾಚಾರದಲ್ಲಿ ಸಾವು ಸಂಖ್ಯೆಯು 58 ದಾಟಿದೆ. ಹೆಚ್ಚಿನವರು ಸೈನಿಕರ ಗುಂಡಿಗೆ ಬಲಿಯಾಗಿದ್ದಾರೆ. ಸಾವಿರಾರು ಜನರು ಗಾಯಗೊಂಡರು.

ಚುರಾಚಂದ್ಪುರದಲ್ಲಿ ಹಿಂಸಾಚಾರವು ನಡೆದೇ ಇದೆ. ಒಂದು ದಿನದ ಮಟ್ಟಿಗೆ ಆದಿತ್ಯವಾರ ಕರ್ಫ್ಯೂ ಸಡಿಲಿಸಲಾಗಿದ್ದು, ಇಂದು ಅದನ್ನು ಕೆಲವೆಡೆ ಮಾತ್ರ ಮುಂದುವರಿಸಲಾಗಿದೆ. ಸಾವಿರಾರು ಮಂದಿ ಮಣಿಪುರದ ಬುಡಕಟ್ಟು ಜನರು ಅಸ್ಸಾಂ ರಾಜ್ಯಕ್ಕೆ ಪಲಾಯನ ಮಾಡಿದ್ದಾರೆ. ಸಾವಿರಾರು ಜನರು ತಾತ್ಕಾಲಿಕ ಶಿಬಿರಗಳಲ್ಲಿ ಉಳಿದಿದ್ದಾರೆ.