ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಕೋರಿದ ನಟ ಶಿವರಾಜಕುಮಾರ್ ಅವರು ಚುನಾವಣೆ ಒಂದು ಸ್ಪರ್ಧೆಯೇ ಹೊರತು ಯುದ್ಧ ಅಲ್ಲ ಎಂಬುದು ತಿಳಿದಿರಲಿ ಎಂದರು. ರಾಜಕುಮಾರ್ ವಿರುದ್ಧ ಚಿತ್ರರಂಗದಲ್ಲೇ ರಾಜಕೀಯ ನಡೆದುದರಿಂದ ಅಧಿಕಾರ ರಾಜಕೀಯ ಎಂದರೆ ಅವರು ದೂರ ಇರುತ್ತಿದ್ದರು.

ಆದರೆ ಶಿವರಾಜಕುಮಾರರ ಹೆಂಡತಿ ಮಾಜೀ ಮುಖ್ಯಮಂತ್ರಿ ದಿವಂಗತ ಸಾರೆಕೊಪ್ಪ ಬಂಗಾರಪ್ಪನವರ ಮಗಳು. ಅವರದು ರಾಜಕೀಯ ಕುಟುಂಬ, ಕಲಾವಿದರದೂ ಆಗಿದೆ. ಬಂಗಾರಪ್ಪ ಹಿಂದೂಸ್ತಾನಿ ಗಾಯಕರು. ಮೊಮ್ಮಗಳು ನಟಿ ನಿರ್ಮಾಪಕಿ. ಶಿವರಾಜಕುಮಾರ್‌ರು ರಾಜಕೀಯವಾಗಿ ತನ್ನ ಹೆಂಡತಿ ಕುಟುಂಬವನ್ನು ಬೆಂಬಲಿಸುವುದು ಅನಿವಾರ್ಯ.
ಅವರ ರಾಜಕೀಯ ಪ್ರಚಾರ ಇಂತಾ ಅಭ್ಯರ್ಥಿ ಬೆಂಬಲಿಸಿ ಎಂಬುದನ್ನು ದಾಟುವುದಿಲ್ಲ. ಆದರೂ ಕೊನೆಗೆ ಕೊಚ್ಚೆ ಬಿಜೆಪಿಯ ಕೆಲವರಿಗೆ ಮರ್ಯಾದೆ ಕೊಟ್ಟು ಮರ್ಯಾದೆ ತೆಗೆದುಕೊಳ್ಳಿ ಎಂದು ಶಿವರಾಜಕುಮಾರ್ ಹೇಳಬೇಕಾಯಿತು. ಹುಬ್ಬಳ್ಳಿಯಲ್ಲಿ ನಾನು ಯಾರನ್ನಾದರೂ ಟೀಕಿಸಿದ್ದೀನಾ ಎಂದು ಪ್ರಶ್ನಿಸಿ ಪತ್ರಕರ್ತರನ್ನು ತಡವರಿಸುವುದಕ್ಕೆ ಬಿಟ್ಟರು.
ಇನ್ನೊಂದೆಡೆ ನನ್ನ ಗೆಳೆಯ ಸುದೀಪ್ ಬಿಜೆಪಿಗೆ ಪ್ರಚಾರ ಮಾಡುತ್ತಿದ್ದಾರೆ. ನಾನು ಅವರನ್ನೂ ಮಾತನಾಡಿಸುತ್ತೇನೆ ಎಂದು ಪ್ರೌಢಿಮೆ ಮೆರೆದರು ಶಿವರಾಜಕುಮಾರ್.