ನವದೆಹಲಿ: ಕಸ್ತೂರ್ಬಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಅಭಿಷೇಕ್ ದತ್ ರವರ ಚುನಾವಣಾ ಪ್ರಚಾರ ಸಮಿತಿಯ ಉಸ್ತುವಾರಿಗಳಾಗಿ ಕೆಪಿಸಿಸಿ ಕಾರ್ಯಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ಮತ್ತು ಸಚಿವ ಎಂ ಸಿ ಸುಧಾಕರ್ ರವರನ್ನು ನೇಮಿಸಿದ್ದು. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಶನಿವಾರ ಬೆಳಗ್ಗೆ ನವದೆಹಲಿಯ ಲೋದಿ ಗಾರ್ಡನ್ ನಲ್ಲಿ ನಡೆಯುತ್ತಿರುವ ಪ್ರಚಾರ ಕಾರ್ಯಕ್ರಮದಲ್ಲಿ ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರೊಂದಿಗೆ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಪಂಜಾಬ್ ಶಾಸಕರಾದ ಕುಲದೀಪ್ ಸಿಂಗ್ ಧಿಲ್ಲೋನ್, ಹಾಸನದ ಸಂಸದರಾದ ಶ್ರೇಯಸ್ ಪಾಟೀಲ್ ಹಾಗೂ ಶಾಸಕರಾದ ಎ.ಸಿ ಶ್ರೀನಿವಾಸ್ ರವರು ಸೇರಿದಂತೆ ಹಲವಾರು ಪಕ್ಷದ ಮುಖಂಡರುಗಳು ನಾಯಕರುಗಳು ಪಾಲ್ಗೊಂಡರು.