ಮಂಗಳೂರು,ಜೂನ್ 06: ಮಂಗಳೂರಿನ ಸಮಾನ ಮನಸ್ಕರು ಮತ್ತು ಮಂಗಳೂರು ಕೆಥೊಲಿಕ್ ಸಭಾಗಳು ಜೂನ್ 6ರ ಮಂಗಳವಾರ ಮಂಗಳೂರು ಗಡಿಯಾರ ಗೋಪುರದ ಬಳಿ ಸಂಜೆ ನಾಲ್ಕೂವರೆ ಗಂಟೆಗೆ ಮಣಿಪುರದಲ್ಲಿ ಕ್ರಿಶ್ಚಿಯನರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದರು.

ಮೊದಲು ಬಿಜೆಪಿ ಸರಕಾರದ ವಿಫಲತೆ ಖಂಡಿಸಿ ಘೋಷಣೆ ಕೂಗಿದರು. ಬಿಶಪ್‌ರಿಂದ ಹಿಡಿದು ಕ್ರಿಶ್ಚಿಯನ್ ಭಗಿನಿಯರವರೆಗೆ ಅಪಾರ ಜನಸ್ತೋಮ ಈ ಪ್ರತಿಭಟನೆಯಲ್ಲಿ ಭಾಗವಹಿಸಿತು.

ಮಣಿಪುರ ರಾಜ್ಯದಲ್ಲಿ ಬುಡಕಟ್ಟು ಜನರ ಮೀಸಲಾತಿ ವಿಚಾರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಚರ್ಚ್‌ಗಳು ಹಾಗೂ ಕ್ರಿಶ್ಚಿಯನ್ನರ ಮೇಲೆ ನಡೆದ ವ್ಯಾಪಕ ದಾಳಿಯನ್ನು ಖಂಡಿಸಿ ಜನನ ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ, ಕಥೋಲಿಕ್ ಸಭಾ ಮಂಗಳೂರು ಪ್ರದೇಶ(ರಿ) ಮತ್ತು ಯುನೈಟೆಡ್ ಕ್ರಿಶ್ಚಿಯನ್ ಫೋರಂ ಮಂಗಳೂರು ಇವುಗಳ ಜಂಟಿ ನೇತೃತ್ವದಲ್ಲಿ ಸಾಮೂಹಿಕ ಧರಣಿ ಬೃಹತ್ ಪ್ರಮಾಣದಲ್ಲಿ ನಡೆಯಿತು.

ಮಣಿಪುರದಲ್ಲಿ ಬಹುಸಂಖ್ಯಾತರಾಗಿರುವ ಬುಡಕಟ್ಟು ಸಮುದಾಯದ ಮಧ್ಯೆ ಸೌಹಾರ್ದ ವಾತಾವರಣವನ್ನು ಸಾಧಿಸುವ ಬದಲು ಅಲ್ಲಿನ ಬಿಜೆಪಿ ರಾಜ್ಯ ಸರಕಾರವು ದ್ವೇಷ ರಾಜಕಾರಣವನ್ನು ನಡೆಸುತ್ತಿದೆ. ಮೈತೈ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಭುಗಿಲೆದ್ದ ಗಲಭೆಯನ್ನು ಮುಂದಿಟ್ಟು ಕುಕಿ ಸಮುದಾಯದ ಕ್ರಿಶ್ಚಿಯನ್ನರ ಹಾಗೂ ಅವರ ಚರ್ಚ್ ಗಳ ಮೇಲೆ ವ್ಯಾಪಕ ದಾಳಿಗಳನ್ನು ನಡೆಸಿ ನೂರಾರು ಸಂಖ್ಯೆಯಲ್ಲಿ ಪ್ರಾಣಹಾನಿಯಾಗಿದ್ದು, 50,000ಕ್ಕೂ ಮಿಕ್ಕಿ ಜನತೆ ಸಂತ್ರಸ್ತರಾಗಿದ್ದಾರೆ. ಕೋಟ್ಯಂತರ ರೂಪಾಯಿಯ ಆಸ್ತಿಪಾಸ್ತಿ ಹಾನಿಯಾಗಿದೆ. ಒಂಬತ್ತು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದೆ. ದೂರಸಂಪರ್ಕ,ಇಂಟರ್ ನೆಟ್ ಸೇರಿದಂತೆ ಎಲ್ಲಾ ಸಂಪರ್ಕಗಳನ್ನು ಕಡಿತಗೊಳಿಸಲಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ದೇಶದ ಒಂದು ಪುಟ್ಟ ರಾಜ್ಯದಲ್ಲಿ ಇಂತಹ ಗಂಭೀರ ಸಮಸ್ಯೆ ತಲೆದೋರಿದರೂ ದೇಶವನ್ನಾಳುವ ಕೇಂದ್ರದ ಬಿಜೆಪಿ ಸರಕಾರವು ಮಾತ್ರ ದಿವ್ಯ ಮೌನ ವಹಿಸಿದೆ ಎಂದು ಪ್ರತಿಭಟನೆ ನಡೆಯಿತು. 

ಮಣಿಪುರ ರಾಜ್ಯದಲ್ಲಿ ಗಲಭೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ,ಮತ್ತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯ ಹೇರಲು ಈ ಧರಣಿ.  ಸಾಮೂಹಿಕ ಧರಣಿ ಜಿಲ್ಲೆಯ ನ್ಯಾಯಪ್ರಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಡೆಯುತು. 

ಕಾರ್ಯಕ್ರಮದ ಸಂಘಟಕರಾಗಿ ರೊಯ್ ಕ್ಯಾಸ್ಟಲಿನೋ, ಸುನಿಲ್ ಕುಮಾರ್ ಬಜಾಲ್, ಆಲ್ಫ್ರೆಡ್ ಮನೋಹರ್, ಸ್ಟ್ಯಾನಿ ಲೋಬೋ, ಕೆ ಅಶ್ರಫ್, ಮಂಜುಳಾ ನಾಯಕ್ ಮೊದಲಾದವರು ಭಾರೀ ಪ್ರತಿಭಟನೆ  ಸಂಘಟಿಸಿದರು.

ಸುನಿಲ್ ಕುಮಾರ್ ಬಜಾಲ್ ಅವರು ಮೊದಲು ಎಲ್ಲರನ್ನೂ ಸ್ವಾಗತಿಸಿದರು.

ಫಾದರ್ ಮ್ಯಾಕ್ಸಿಂ ನೊರೊನ್ಹಾ, ರೊಯ್ ಕ್ಯಾಸ್ಟಲಿನೊ, ಆಲ್ಫ್ರೆಡ್, ಅನಿಲ್ ಸಿಕ್ವೇರಾ, ನೊರಿನಾ ಪಿಂಟೋ, ಕೆ. ಅಶ್ರಪ್, ಮೊಹಮದ್ ಕುಂಜತ್ತಬೈಲ್ ಮೊದಲಾದವರು ಭಾಗವಹಿಸಿದರು. ಎಡ ಪಕ್ಷಗಳ ನಾಯಕ ನಾಯಕಿಯರು ಮತ್ತು ಕ್ರಿಶ್ಚಿಯನ್ ಬಂಧುಗಳು ಇದರಲ್ಲಿ ಭಾಗವಹಿಸಿದರು.

ರೊಯ್ ಕ್ಯಾಸ್ಟಲಿನೊ  ಅವರು ಮಾತನಾಡಿ ತೀರಾ ಕಡಿಮೆ ಜನಸಂಖ್ಯೆಯ ಮಣಿಪುರವು ರಾಜಕೀಯ ಮತ್ತು ಸಾಮಾಜಿಕವಾಗಿ ಅಸಮತೋಲನದಿಂದ ಕೂಡಿದೆ. ಇಲ್ಲಿನ ಬುಡಕಟ್ಟು ಮೇಟಿ ಜನರು ಶಾಂತಿಯುತವಾಗಿ ಮೀಸಲಾತಿ ಮಾಡಿ ಮೆರವಣಿಗೆ ನಡೆಸಿದರು.  ಆದರೆ ಇದನ್ನು ಸಮಾಜವಿರೋಧಿ ಶಕ್ತಿಗಳು ಹಿಂಸಾಚಾರಕ್ಕೆ ತಿರುಗಿಸಿದ್ದಾರೆ.

ಮುನ್ನೂರ ಹದಿನೇಳು ಇಗರ್ಜಿಗಳನ್ನು, ಅಷ್ಟೇ ಸಂಖ್ಯೆಯಷ್ಟು ಕ್ರಿಶ್ಚಿಯನ್‌ ಶಾಲೆಗಳನ್ನು, ಅಷ್ಟೇ ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಮನೆಗಳನ್ನು ಧ್ವಂಸ ಮಾಡಿದ್ದಾರೆ. ರಾಜ್ಯದ 13 ಶೇಕಡಾದಷ್ಟು ಕ್ರಿಶ್ಚಿಯನ್ನರನ್ನು ಸ್ಥಳಾಂತರ ಮಾಡಿಸಿದ್ದಾರೆ. ನಮಗೆ ನ್ಯಾಯ ಕೇಳಲು ಈ ಹೋರಾಟ, ಮನುಷ್ಯತ್ವದ ದೃಷ್ಟಿಯಿಂದ ಈ ಹೋರಾಟ ಮುಂದುವರಿಯುತ್ತದೆ. ಪೋಲೀಸು ಸರಕಾರ ಏನು ಮಾಡುತ್ತಿದ್ದರು? ಇದು ಷಡ್ಯಂತ್ರವಾಗಿದ್ದು ಇದಕ್ಕೆ ಕೂಡಲೆ ನ್ಯಾಯ ಕೊಡಿಸಬೇಕು. ಕ್ರಿಶ್ಚಿಯನರನ್ನು ಅಲ್ಲಿಂದ ಓಡಿಸಲು ಪ್ರಯತ್ನಿಸಿದವರು ಯಾರು ಎಂದು ಕ್ಯಾಸ್ಟಲಿನೊ ಪ್ರಶ್ನಿಸಿದರು.