ಪ್ರಾಥಮಿಕ ಶಾಲಾ ಮಕ್ಕಳಿಗೆ ಮೂಲ ಕಲಿಕೋಪಕರಣ ಮೂಲಕ ಹೇಳಿಕೊಟ್ಟಾಗ ಮಕ್ಕಳು ಶೀಘ್ರವಾಗಿ, ಸುಲಭವಾಗಿ ಗಣಿತವನ್ನು ಕಲಿಯಬಹುದು. ಇದಕ್ಕೆ ಮೊದಲು ನಾವು ಅಭ್ಯಾಸ ಮಾಡಬೇಕೆಂದು ಅಕ್ಷರ ಫೌಂಡೇಶನ್ ನ ರಿಸೋರ್ಸ್ ವಿಭಾಗದ ಅಧಿಕಾರಿ ದಿವ್ಯ ರಾಜೇಶ್ ರವರು ಅಭಿಪ್ರಾಯ ಪಟ್ಟಿದ್ದಾರೆ.
ಅವರು ಬೈಕಾಂಪಾಡಿ ಇಂದಿರಾ ಮಾಧವ ವಿಧ್ಯಾರ್ಥಿ ಭವನದಲ್ಲಿ ಜರಗಿದ ಗಣಿತ ಕಲಿಕಾ ಆಂದೋಲನ ದ ಶೈಕ್ಷಣಿಕ ಸ್ವಯಂಸೇವಕರಿಗೆ ಜರಗಿದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿದಾರರಾಗಿ ಭಾಗವಹಿಸಿ, ಗಣಿತದ ಬೋಧನೆ, ಕಲಿಕಾ ವಿಧಾನಗಳು, ಸಂಕಲನ, ವ್ಯವಕಲನ, ಭಾಗಕಾರ , ಗುಣಾಕಾರ, ಸ್ಥಾನಬೆಲೆ, ಸಂಖ್ಯೆ, ಎಣಿಕೆ , ಸಂಖ್ಯಾ ಪರಿಕಲ್ಪನೆ ಮುಂತಾದ ಗಣಿತ ಕಲಿಕೆಯ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಿದರು.
ಶಿಕ್ಷಣ ಪ್ರೇಮಿ, ಶ್ರೀ ವಾಸುದೇವ ಐತಾಳ್ ರವರು ಗಣಿತ ಕಲಿಕಾ ಕಾರ್ಯಕ್ರಮ ದ ಉದ್ದೇಶ , ಪ್ರಸ್ತುತ ಸನ್ನಿವೇಶದಲ್ಲಿ ಪ್ರಾಥಮಿಕ ಶಾಲಾ ಮಕ್ಕಳು ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆ ಮಾಡುವಲ್ಲಿ ನಮ್ಮೆಲ್ಲರ ಪಾತ್ರ ಬಹಳ ಪ್ರಾಮುಖ್ಯತವಾದುದು.
ನಾವೆಲ್ಲರೂ ಸ್ವಯಂ ಸ್ಪೂರ್ತಿ ಯಿಂದ ಮಕ್ಕಳು ಮರೆತಿರುವ ವಿಷಯಗಳನ್ನು ನಾವು ಹೇಳಿಕೊಡುವ ಮೂಲಕ ಸಾರ್ಥಕ ವಾದ ಸೇವೆಯನ್ನು ಮಾಡೋಣ, ಮತ್ತು ಶಿಕ್ಷಕರೊಂದಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಿ,
ಈ ಕಾರ್ಯಕ್ರಮಕ್ಕೆ ಎಲ್ಲರೂ ಸೇರಿಕೊಳ್ಳೊಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಯಶ್ರೀ ಐತಾಳ್ , ಅಕ್ಷರ ಫೌಂಡೇಶನ್ ನ ಜಿಲ್ಲಾ ಸಮನ್ವಯಾಧಿಕಾರಿ ನವೀನ್, ಬೈಕಾಂಪಾಡಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ, ಶಿಕ್ಷಣ ಪ್ರೇಮಿಗಳು ,ಶಿಕ್ಷಕರು, ಸ್ವಯಂಸೇವಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ನಡೆಸಲು ಬೈಕಾಂಪಾಡಿ ಮೊಗವೀರ ಸಮುದಾಯ ಭವನವನ್ನು ಉಚಿತವಾಗಿ ನೀಡಿದರು.