ಮಂಗಳೂರು: ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಭಾಗಿಯಾಗಿ ಜನಮನ್ನಣೆ ಗಳಿಸಿದ ಅಸ್ತಿತ್ವ (ರಿ.) ಮಂಗಳೂರು ತಂಡದ  ನಾಟಕ ಮತ್ತಾಯ 22:39 ಇದೇ ಎಪ್ರಿಲ್ ತಿಂಗಳ 3ನೇ ತಾರೀಖಿನಂದು ಸಂಜೆ 7 ಘಂಟೆಗೆ ಸರಿಯಾಗಿ ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಿತು. 

ಈಗೀಗ ನಾಟಕವು ಗೋವಾದಲ್ಲಿ ನಡೆದ  Serendipity Arts Festival, ಅಸ್ಸಾಂನಲ್ಲಿ ನಡೆದ MWIHUR ಅಂತರಾಷ್ಟ್ರೀಯ ನಾಟಕೋತ್ಸವದಲ್ಲಿ, ಭಾರತೀಯ ರಂಗ ಶಿಕ್ಷಣ ಕೇಂದ್ರ, ದೆಹಲಿ ಆಯೋಜಿಸಿದ ಅಂತರಾಷ್ಟ್ರೀಯ ರಂಗಮಹೋತ್ಸವದಲ್ಲಿ, ಹಾಗೂ ದೇಶದ ಪ್ರತಿಷ್ಟಿತ ನಾಟಕ ಸ್ಪರ್ದೆ META ದಲ್ಲೂ ಆಯ್ಕೆಯಾಗಿ ಯಶಸ್ವಿ ಪ್ರದರ್ಶನಗಳನ್ನು ನೀಡಿತ್ತು. ಕಳೆದ ವರ್ಷ ಮಂಗಳೂರಿನಲ್ಲಿ ಮೊದಲ ಪ್ರದರ್ಶನ ಕಂಡ ಬಳಿಕ, ಹಲವು ರಾಜ್ಯಗಳನ್ನು ಸುತ್ತಿ ಇದೇ ಮೊದಲ ಬಾರಿಗೆ ಮತ್ತೊಮ್ಮೆ ಮಂಗಳೂರಿನಲ್ಲಿ, ವಿಶಿಷ್ಟವಾದ ರಂಗಮಂದಿರದ ವಿನ್ಯಾಸದಲ್ಲಿ ಈ ನಾಟಕದ ಪ್ರದರ್ಶನ ನಡೆಯಿತು. ನಾಟಕವನ್ನು ಕೇರಳದ ಪ್ರಖ್ಯಾತ ನಿರ್ದೇಶಕರಾದ ಅರುಣ್ ಲಾಲ್ ಇವರು ನಿರ್ದೇಶಿಸಿದ್ದು, ಕ್ಲ್ಯಾನ್ವಿನ್ ಹಾಗೂ ಕುಮಾರ್ ಲಾಲ್ ನಟಿಸಿ, ಅನುಶ್ ಶೆಟ್ಟಿ ಹಾಗೂ ತಂಡ ಸಂಗೀತ ಸಂಯೋಜಿಸಿದ್ದು ಜೋಯೆಲ್ ಲೋಬೋ ನಿರ್ವಹಿಸಿದರು. ಬೆಳಕಿನ ವಿನ್ಯಾಸ ಹಾಗೂ ನಿರ್ವಹಣೆಯನ್ನು ಕ್ರಿಸ್ಟಿ . ಟಿ. ಕೊಚುಬಾವರವರ ಮೂಲ ಕಥೆಯನ್ನು ಡಾ. ಸುಧಾಕುಮಾರಿಯವರು ಈ ನಾಟಕದ ಕಥೆಯನ್ನು ಅನುವಾದ ಮಾಡಿದರು. ಈ ನಾಟಕ ನಿರ್ದಿಗಂತ, ಮೈಸೂರು ತಂಡದ ರಂಗವಿಕಾಸ ಕಾರ್ಯಯೋಜನೆಯಲ್ಲಿ ನಿರ್ಮಾಣಗೊಂಡ ನಾಟಕವಾಗಿದ್ದು, ವಂದನೀಯ ಆಲ್ವಿನ್ ಸೆರಾವೊರವರ ಮುಂದಾಳತ್ವದ ಅಸ್ತಿತ್ವ (ರಿ.) ಮಂಗಳೂರು ಆಯೋಜಿಸಿದೆ. ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರ ಹಾಗೂ ಕನ್ನಡ ವಿಭಾಗ ಸಹಭಾಗಿಯಾಗಿ ಕಾರ್ಯನಿರ್ವಹಿಸಿದವು.