ಹೆಗ್ಗಡದೇವನಕೋಟೆ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯೆಯರು ಸಂಘದ ಬಾಗಿಲಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಅಧ್ಯಕ್ಷೆ ನಾಗಮ್ಮ, ಕಾರ್ಯದರ್ಶಿ ಸಂಧ್ಯಾ ಸೇರಿ‌ 20 ಲಕ್ಷ ರೂಪಾಯಿ ಅವ್ಯವಹಾರ ನಡೆಸಿದ್ದಾರೆ. ಮಾತುಕತೆಯಲ್ಲಿ ಅದು ಬಗೆಹರಿಯದ್ದರಿಂದ ಬೀಗ ಹಾಕಿ ಪ್ರತಿಭಟಿಸಿದರು.

ಅಲ್ಲದೆ ಇವರು ಮಹಿಳೆಯರಿಂದ ರೂ. 27ಕ್ಕೆ ಕೊಳ್ಳುವ ಹಾಲನ್ನು ಮಂಡಳಿಗೆ ಚೂರು ಪಾರು ಕಳುಹಿಸಿ, ಹತ್ತಿರದ ಕಬಿನಿ ಜಂಗಲ್ ರೆಸಾರ್ಟ್‌ಗೆ 35 ರೂಪಾಯಿಗೆ ನೇರ ಮಾರುತ್ತ ಐದು ವರುಷಗಳಿಂದ ಅವ್ಯವಹಾರ ನಡೆಸಿದ್ದಾರೆ. ಮಹಿಳೆಯರು ಆ ಬಗೆಗೂ ಆಕ್ರೋಶ ವ್ಯಕ್ತಪಡಿಸಿದರು.