ರೋಮ್‌ನ ವ್ಯಾಟಿಕನ್ ಸಿಟಿಯಲ್ಲಿ ಭಾರತದ ಪ್ರಧಾನಿ ಮೋದಿಯವರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ ಮಾತನಾಡಿದರು.

ಇಟೆಲಿ ಪ್ರಧಾನಿ ಮಾರಿಯೋ ಡ್ರಾಫಿ ಆಹ್ವಾನದ ಮೇರೆಗೆ ಜಿ20 ಸಮಾವೇಶದಲ್ಲಿ ಭಾಗವಹಿಸಲು ಮೋದಿಯವರು ಎರಡು ದಿನಗಳ ರೋಮ್ ಪ್ರವಾಸಕ್ಕೆ ಬಂದಿದ್ದಾರೆ. ಅವರ ಜೊತೆಗೆ ವಿದೇಶಾಂಗ ಮಂತ್ರಿ ಎಸ್. ಜೈಶಂಕರ್, ಭದ್ರತಾ ಸಲಹೆಗಾರ ಅಜಿತ್ ದೋವಲ್ ಇದ್ದರು.

ಈ ಸಂದರ್ಭದಲ್ಲಿ ಪೋಪ್‌ರ ಭೇಟಿ ನಡೆಯಿತು. 20 ನಿಮಿಷಗಳ ಭೇಟಿ ಗಂಟೆ ಎಳೆಯಿತು. ನಾನಾ ಸಂಗತಿ ಮಾತನಾಡಿದ್ದಾಗಿ ಹೇಳಲಾಗಿದೆ.