



2018ರ ಸೆಪ್ಟೆಂಬರ್ 30 ರಂದು ಧರ್ಮಸ್ಥಳದಲ್ಲಿ ನಡೆದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಪುನೀತ್ ರಾಜ್‍ಕುಮಾರ್ ಭಾಗವಹಿಸಿದ್ದರು.
ಖ್ಯಾತ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ತಿಳಿದು ಆಘಾತವಾಯಿತು. ಅವರ ನೇರ ನಡೆ-ನುಡಿ, ಸಜ್ಜನಿಕೆ ಮತ್ತು ಸರಳ ವ್ಯಕ್ತಿತ್ವವನ್ನು ನಾನು ಕೂಡಾ ಮೆಚ್ಚಿಕೊಂಡಿದ್ದೇನೆ. ಅವರ ಭಾವಪೂರ್ಣ ನಟನೆಯಿಂದಾಗಿ ಅವರು ಕನ್ನಡಿಗರ ವಿಶೇಷ ಅಭಿಮಾನ ಮತ್ತುಗೌರವಕ್ಕೆ ಪಾತ್ರರಾಗಿದ್ದರು.
ಅವರು ವಿಧಿವಶರಾಗಿರುವುದು ನಮಗೆಲ್ಲರಿಗೂ ತೀವ್ರ ದುಃಖವನ್ನುಂಟು ಮಾಡಿದೆ. ಅವರ ಅಭಿಮಾನಿಗಳೆಲ್ಲರೂ ಈ ಸಂದರ್ಭವನ್ನು ತಾಳ್ಮೆಯಿಂದ ಸ್ವೀಕರಿಸಿ ಅವರ ಆತ್ಮಕ್ಕೆ ಚಿರ ಶಾಂತಿಕೋರೋಣ.
ಅವರು ಧರ್ಮಸ್ಥಳದಲ್ಲಿ ಒಂದೆರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ .ನಾನು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರಿಗೆ ಮತ್ತು ಅಭಿಮಾನಿಗಳಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.