ರಾಜಕುಮಾರ್ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಅವರು 1998ರಲ್ಲಿ ಮೈಸೂರಿನ ಊಟಿ ರಸ್ತೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶಕ್ತಿ ಧಾಮ ಸ್ಥಾಪಿಸಿದ್ದರು. ಅದರ ಸಹಿತ ಹಲವು ಗುಟ್ಟಿನ ದಾನಗಳ ಸರದಾರ ಪುನೀತ್ ರಾಜ್‍ಕುಮಾರ್ ಗುಟ್ಟಾಗಿಯೇ ಸಾವಿನ ಮನೆ ಸೇರಿದ್ದಾರೆ.
26 ಅನಾಥಾಶ್ರಮ, 48 ಉಚಿತ ಶಾಲೆಗಳು, 16 ವೃದ್ಧಾಶ್ರಮಗಳು, 19 ಗೋಶಾಲೆಗಳು, 1,800 ಮಕ್ಕಳಿಗೆ ಉಚಿತ ಶಿಕ್ಷಣ ಎಂದು ಪುನೀತ್ ರಾಜ್‍ಕುಮಾರ್ ಸೇವೆ ಅಪಾರ. ಹೆತ್ತವರು ಕಟ್ಟಿದ ಶಕ್ತಿಧಾಮಕ್ಕೆ ಕೋಟ್ಯಾಧೀಶ ಕಾರ್ಯಕ್ರಮದ ಆದಾಯ ನೀಡಿದ್ದರು.