ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಬನ್ನಡ್ಕ ದ ಶ್ರೀಕ್ಷೇತ್ರ ಕಲಾಮಂದಿರದಲ್ಲಿ 3 ನೇ ವರ್ಷದ ಶಾರದೋತ್ಸವ ಅಕ್ಟೋಬರ್ 11 ಹಾಗೂ 12 ರಂದು ನಡೆಯಲಿದೆ.
ಅಕ್ಟೋಬರ್ 11ರಂದು ಬೆಳಗ್ಗೆ ಗಣಹೋಮ, ಒಂಟಿಕಟ್ಟೆ ಯಿಂದ ಶಾರದಾ ಮಾತೆಯ ವಿಗ್ರಹ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪನೆ. ಸಾರ್ವಜನಿಕರಿಗೆ ಹೂ ಕಟ್ಟುವ ಸ್ಪರ್ಧೆ, ಭಜನೆ, ಮಧ್ಯಾಹ್ನ ದುರ್ಗಾ ಹೋಮ. ಸಂಜೆ ಭಜನೆ, ರಾತ್ರಿ ತುಳು ನಾಟಕ ಒರಿಯಾಂಡಲ ಸರಿಬೋಡು.
ಅಕ್ಟೋಬರ್ 12 ರಂದು ಬೆಳಗ್ಗೆ ಮಕ್ಕಳಿಗೆ ಮುದ್ದು ಶಾರದೆ ಸ್ಪರ್ಧೆ, ಸಾರ್ವಜನಿಕರಿಗೆ ಮೆಹೆಂದಿ ಸ್ಪರ್ಧೆ. ಮಧ್ಯಾಹ್ನ ಭಜನೆ, ಸಂಜೆ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ, ತರುವಾಯ ವೈಭವದ ಶೋಭಾ ಯಾತ್ರೆಯಲ್ಲಿ ಅಲಂಗಾರು ದೇವಾಲಯದ ಮಾನಸ ಗಂಗೋತ್ರಿಯಲ್ಲಿ ಜಲ ಸ್ತಂಭನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.