ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಜವನೆರ್ ಬೆದ್ರ, ಅಬ್ಬಕ್ಕ ಬ್ರಿಗೇಡ್, ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಮತ್ತು ಆಳ್ವಾಸ್ ಹೋಮಿಯೋಪತಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಜೂನ್ 6ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಸಸಿ ವಿತರಣೆ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮವನ್ನು ಉದ್ಘಾಟಿಸಿ ಪುರಸಭಾ ಅಧ್ಯಕ್ಷೆ ಜಯಶ್ರೀ ಅವರು ಅಪಘಾತ ಸಂದರ್ಭದಲ್ಲಿ ರಕ್ತದ ಅವಶ್ಯಕತೆಯ ಮಹತ್ವ ತಿಳಿಸಿದರು. ಇದೇ ಸಂದರ್ಭದಲ್ಲಿ 72 ಬಾರಿ ರಕ್ತದಾನ ಗೈದ ಬೆಳುವಾಯಿ ಪ್ರವೀಣ್ ಜೈನ್ ರನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಸಂಮಾನಿಸಿ ಸ್ವಚ್ಛತೆ ಹಾಗೂ ರಕ್ತದಾನಕ್ಕೆ ಬ್ರಿಗೇಡ್ ನೀಡುತ್ತಿರುವ ಆದ್ಯತೆಯನ್ನು ಅಭಿನಂದಿಸಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸಿಎಫ್ ಪಿ.ಶ್ರೀಧರ್ ಮಾತನಾಡಿ ರಕ್ತದಾನ ಮಾಡುವುದರಿಂದ ಮಧುಮೇಹ ಇತ್ಯಾದಿ ಖಾಯಿಲೆಗಳು ದೂರವಾಗುತ್ತದೆ. ಆದರೆ ಆರೋಗ್ಯವನ್ನು ಸದಾ ಕಾಪಾಡಿಕೊಳ್ಳ ಬೇಕು ಎಂದು ತಿಳಿ ಹೇಳಿದರು. ಕೇವಲ ಒಂದು ಯುನಿಟ್ ರಕ್ತದಿಂದ ಸುಮಾರು 42 ಮಂದಿಯ ಪ್ರಾಣ ಉಳಿಸಲು ಸಾಧ್ಯ ಎಂದು ಡಾ. ಚಾರು ಖೋಸ್ಲಾ ವಿವರಿಸಿದರು. 

ವೇದಿಕೆಯಲ್ಲಿ ಡಾ. ಪ್ರವೀಣ್ ರಾಜ್ ಆಳ್ವ, ವಿನಯ್ ಕುಮಾರ್, ಮುರಳೀಧರ ಕೋಟ್ಯಾನ್, ಗುರು ಒಂಟಿಕಟ್ಟೆ, ಪೂರ್ಣಚಂದ್ರ, ಬಿಂದಿಯಾ, ಹಾಜರಿದ್ದರು. ಜವನೆರ್ ಬೆದ್ರದ ಅಧ್ಯಕ್ಷ ಅಮರನಾಥ ಕೋಟೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಲತಾ ರಕ್ತದಾನ ಗೈದವರ ಪಟ್ಟಿ ಓದಿದರು. ಸುಮಾರು ನೂರಕ್ಕೂ ಹೆಚ್ಚು ಮಂದಿ ರಕ್ತದಾನ ಗೈದರು. ಸಂದೀಪ್ ಕಾರ್ಯಕ್ರಮ ನಿರ್ವಹಿಸಿದರು.