ಮೂಡುಬಿದಿರೆ:  ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿಗಳವರಿಂದ ದೇಶ ವ್ರತ ದಿಗ್ ವ್ರತಗಳ ಬದಲಾವಣೆಯ ನಿಯಮಗಳೊಂದಿಗೆ ಚಾತುರ್ಮಾಸ ಕಲಶ ಸ್ಥಾಪನ ಕಾರ್ಯಕ್ರಮ ಜು. 22 ರಂದು ರಾತ್ರಿ 7.15ಕ್ಕೆ ಜರುಗಿತು. 

ಆ ಪ್ರಯುಕ್ತ ಮೂರು ದಿನ ಪರ್ಯಂತವಿವಿಧ ಧಾರ್ಮಿಕ ಪೂಜೆ ಆರಾಧನೆ ಜರುಗಿದವು. ಕ್ರಮವಾಗಿ ಜೂಲೈ 23ರಂದು  ವೀರ ಶಾಸನ ಜಯಂತಿ 24.7.24ರಂದು ಶ್ರೀ ಮಠದಲ್ಲಿ ಪೂರ್ವಾ ಚಾರ್ಯರ ಪೂಜೆ, ಅಭಿಷೇಕ 25.7.24ರಂದು ಚಾರಿತ್ರ ಚಕ್ರವರ್ತಿ 141ನೇ ಜಯಂತಿ ಆಚರಣೆ 26.7.24 ಪ್ರಾತ:ಕಾಲ 7.35ಕ್ಕೆ ಭಗವಾನ್ ವಾಸು ಪೂಜ್ಯ ಗರ್ಭ ಕಲ್ಯಾಣ ಪ್ರಯುಕ್ತ ಕೆರೆ ಬಸದಿ ಭಗವಾನ್ ಮಲ್ಲಿನಾಥ ಸ್ವಾಮಿ, ಇಪ್ಪತ್ತ ನಾಲ್ಕು ತೀರ್ಥoಕರರ ಅಭಿಷೇಕ ಕೆರೆಯಲ್ಲಿ ಪ.ಪೂ ಭಟ್ಟಾರಕ ಸ್ವಾಮೀಜಿ ಭಾಗಿನ ಸಮರ್ಪಣೆ ನೆರವೇರಿಸಿದರು. ಬಸದಿ ಮುಕ್ತೇಸರ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ಸುವಿಧಿ ಇಂದ್ರ ಮೋಹಿನಿ, ಕೇಸರಿ ,ಶ್ವೇತಾ ಜೈನ್, ಶ್ರೇಯಾoಶ ಜೈನ್ ದೆಹಲಿ, ಅಂಕಿತ್ ಜೈನ್ ಮ. ಪ್ರದ ಯಾತ್ರಾರ್ಥಿ ಉಪಸ್ಥಿತರಿದ್ದರು.