ಮೂಡುಬಿದಿರೆ: ಇಲ್ಲಿಗೆ ಸಮೀ ಪದ ಬೆಳುವಾಯಿ ಮರಿಯಮ್ಮ ನಿಕೇ ತನ್ ಶಾಲೆಯಲ್ಲಿ ಜೂನ್ 28ರಂದು ಹೆತ್ತವರ ಮಾಹಿತಿ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರು ಸೂರ್ಯ ಫೌಂಡೇಶನ್ ನ ಸಂಯೋಜಕ, ಹಿರಿಯ ಪತ್ರಕರ್ತ ರಾಯಿ ರಾಜಕುಮಾರ್ ಮೂಡುಬಿದಿರೆಯವರು ಆಗಮಿಸಿ ಗುಣವಂತ ಹೆತ್ತವರ ಜವಾಬ್ದಾರಿಗಳನ್ನು ತಿಳಿಸಿಕೊಟ್ಟರು.

ಅವರು ತಮ್ಮ ಭಾಷಣದಲ್ಲಿ ಪ್ರಕೃತಿ ನಮಗೆ ನೀಡಿದ ಸುಂದರ ಪರಿಸರವನ್ನು ಇದ್ದಂತೆಯೇ ಬಿಟ್ಟು ಹೋಗುವುದರ ಒಟ್ಟಿಗೆ ಬಹಳ ಉತ್ತಮವಾದಂತಹ ಮುಂದಿನ ತಲೆಮಾರನ್ನು ಕೂಡ ನಿರ್ಮಿಸುವ ಜವಾಬ್ದಾರಿ ಹೆತ್ತವರದಾಗಿದೆ. ಮಾತು, ಮನೆ, ಮನ ಉತ್ತಮವಾಗಿದ್ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಇದೆ ಎನ್ನುವುದನ್ನು ಹಲವಾರು ಉದಾಹರಣೆಗಳ ಮೂಲಕ ಪ್ರಸ್ತುತಪಡಿಸಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಜೆಸಿಂತಾ ಲಸ್ರಾದೋ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಇಕ್ಬಾಲ್ ಅವರು, ಶಿಕ್ಷಕರ ಪ್ರತಿನಿಧಿ ಅಮಿತಾ ಅವರು ಇದ್ದರು.  ಪ್ರಿಯ ಸ್ವಾಗತಿಸಿದರು.  ಸುನೀತಾ ಕಾರ್ಯಕ್ರಮ ನಿರ್ವಹಿಸಿದರು. ಶಾಂತಕುಮಾರಿ ವಂದಿಸಿದರು. ಇದೇ ಸಂದರ್ಭ ದಲ್ಲಿ ನೂತನ ಶಿಕ್ಷಕರಕ್ಷಕ ಸಂಘದ ಸದಸ್ಯರ ಆಯ್ಕೆಯು ನಡೆಯಿತು.