ಮೂಡುಬಿದಿರೆ: ಸ್ಥಳೀಯ ಶ್ರೀ ನಾರಾಯಣ ಗುರು ಜಯಂತಿಯ ಅಂಗವಾಗಿ ಮೂಡುಬಿದಿರೆ ನಾರಾಯಣ ಗುರು ಪ್ರತಿಷ್ಠಾನದವರು ಮೂಡುಬಿದಿರೆಯ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯನ್ನು ಬಹಳ ಉತ್ತಮವಾಗಿ ನಡೆಸುತ್ತಿರುವ ಕಾರಣ ಪ್ರಕಾಶ್ ಶೆಟ್ಟಿಗಾರ್ ಗೆ ನಾರಾಯಣ ಗುರು ಪ್ರಶಸ್ತಿ -2024 ನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನವನ್ನು, ದೇಣಿಗೆಯನ್ನು ನೀಡಿದರು. ದ.ಕ.ಜಿಲ್ಲಾ ಬಿ.ಜೆ.ಪಿ.ಮಾಜಿ ಅಧ್ಯಕ್ಷ ಕಾರ್ಯದರ್ಶಿ ಮೇಘ ರಾಣಿ, ಸುದರ್ಶನ ಎಂ., ಪ್ರತಿಷ್ಠಾನದ ಅಧ್ಯಕ್ಷ ಶಿವಾನಂದ ಶಾಂತಿ, ಸುರೇಶ್ ಅಂಚನ್, ಪ್ರದೀಪ್ ಭಟ್, ಹರೀಶ್, ರಮೇಶ್ ಹಾಜರಿದ್ದರು.