ಮೂಡುಬಿದಿರೆ: ಸ್ಥಳೀಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದರೆ ತಾಲೂಕು ಪತ್ರಕರ್ತರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ಹಿರಿಯ ಪತ್ರಕರ್ತ ದಿವಂಗತ ಕರ್ವಾಲು ಮನೋಹರ ಪ್ರಸಾದ್ ರವರ ನೆನಪು ಕಾರ್ಯಕ್ರಮ ಆಗಸ್ಟ್ 6ರಂದು ವಿದ್ಯಾ ಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾಕ್ಟರ್ ಮೋಹನ್ ಆಳ್ವಾ ಮಾತನಾಡಿ ಮನೋಹರ್ ಪ್ರಸಾದ್ ಅವರು ಬಹು ಮುಖಗಳ ಬಹುಮುಖ್ಯ ಪತ್ರಕರ್ತರಾಗಿದ್ದು, ಪರಿಪೂರ್ಣ ವರದಿಗಾರನಂತಹ ವಿಶ್ವಕೋಶವಾಗಿದ್ದರು. ಪತ್ರಿಕೆ, ಸಿನಿಮಾ, ಟಿವಿ, ಕ್ರೀಡೆ, ಸಂಗೀತ, ರಂಗಭೂಮಿ ಈ ರೀತಿ ಎಲ್ಲಾ ಪ್ರಕಾರದ ಸಾಹಿತ್ಯಗಳಲ್ಲೂ ಪ್ರೌಢಶಾಮೆಯೊಂದಿಗೆ ಅಧ್ಯಯನ ಶೀಲ ಸಾಧಕನಾಗಿದ್ದು ಸುಂದರ ನಿರೂಪಕರಾಗಿ ಬೆಳೆದು ಬಂದರು. ಅದುದರಿಂದಲೇ ಅವರನ್ನು ಸೂಪರ್ ಸ್ಟಾರ್ ಎಂದು ಕೊಂಡಾಡಬಹುದಾಗಿದೆ ಎಂದರು. ಪ್ರತಿ ವರ್ಷದ ನುಡಿಸಿರಿ ವಿರಾಸತ್ ಗಳು ಪ್ರಾರಂಭವಾಗುತ್ತಿದ್ದುದೇ ಮನೋಹರ್ ಪ್ರಸಾದ್ ಅವರ ನಿರೂಪಣೆಯ ಮೂಲಕ ಎಂದು ನೆನಪಿಸಿಕೊಂಡರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಮಂಗಳೂರು ಪ್ರೆಸ್ ಕ್ಲಬ್ ನ ಅಧ್ಯಕ್ಷ ಪಿ ಬಿ ಹರೀಶ್ ರೈ ಅವರು ಮನೋಹರ ಪ್ರಸಾದ್ ಅವರ ಸ್ಮರಣೆಯನ್ನು ಮಾಡಿ ಪತ್ರಕರ್ತರ ವ್ಯಾಪ್ತಿ ಮೀರಿ ಬೆಳೆದ ಮನೋಹರ ಪ್ರಸಾದ್ ಎಲ್ಲವನ್ನು ಕೇಳುವ, ಎಲ್ಲವನ್ನು ತಿಳಿಯುವ ಕುತೂಹಲಿಯಾಗಿದ್ದು ಅಪಾರ ಸ್ಮರಣಶಕ್ತಿಯನ್ನು ಹೊಂದಿದ್ದರು. ಅಂತಹ ಮೇರು ವ್ಯಕ್ತಿತ್ವದ ಅವರು ಸದಾ ಸ್ಮರಣೀಯರು ಎಂದು ನೆನಪಿಸಿಕೊಂಡರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ, ಮೂಡುಬಿದರೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ, ಮಂಗಳೂರು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಅನ್ನು ಮಂಗಳೂರು ಇತ್ಯಾದಿಯರು ಹಾಜರಿದ್ದರು. ಮೂಡುಬಿದ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಧನ್ಯವಾದ ಸಲ್ಲಿಸಿದರು.
ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ.