ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಳೆದ 30 ವರ್ಷಗಳಿಂದ ಆಯೋಜಿಸುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ 2024 ಡಿಸೆಂಬರ್ 10 ರಿಂದ 15 ರವರೆಗೆ ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಭಟ್ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.
ಸಾಂಸ್ಕೃತಿಕ ವೈಭವ ದೊಂದಿಗೆ 34 ಜಿಲ್ಲೆಯ 1600 ಸ್ಕೌಟ್ಸ್ , ಗೈಡ್ಸ್,, ರೋವರ್ಸ್, ರೇಂಜರ್ಸ್ ಗಳ ಶಿಬಿರವು ಸಮ್ಮೇಳಿ ತಗೊಂಡು ವಿಭಿನ್ನವಾದ ರೀತಿಯಲ್ಲಿ ಕಂಗೊಳಿಸಲಿದೆ. ಕೇವಲ 250 ಜನರಿಂದ ಪ್ರಾರಂಭಗೊಂಡ ವಿರಾಸತ್ ಈಗ 40,000 ಜನಕ್ಕೆ ವಿಸ್ತರಿಸಲ್ಪಟ್ಟು ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವಾಗಿ ರಂಜನೀಯ ಗೊಂಡಿದೆ. ದೇಶ ವಿದೇಶದ ಜನರೊಂದಿಗೆ- ಕಲಿಕೆ, ಸಾಂಸ್ಕೃತಿಕ, ಕ್ರೀಡೆ ಇತ್ಯಾದಿ ಆಳ್ವಾಸ್ ದತ್ತು ಸ್ವೀಕರಿಸಿದ 3000 ಮಕ್ಕಳೊಂದಿಗೆ ವೈವಿಧ್ಯಮಯವಾಗಿ ಮೂಡಿ ಬರುತ್ತಿರುವ ಕಾರ್ಯಕ್ರಮ ಇತರ ಎಲ್ಲ ಕಾರ್ಯಕ್ರಮಗಳಿಗೆ ಮಾದರಿಯಾಗಿ ಕಳೆದ 30 ವರ್ಷಗಳಿಂದ ಕಂಗೊಳಿಸುತ್ತಿದೆ. ಪ್ರತಿವರ್ಷ ದೆಹಲಿಯಲ್ಲಿಯೂ ಪ್ರಧಾನ ಮಂತ್ರಿಗಳ ಎದುರಿಗೆ ಸುಮಾರು 400ಕ್ಕೂ ಹೆಚ್ಚು ಮಕ್ಕಳಿಂದ ಭಾಷೆಯ ಅಡೆ-ತಡೆ ಬರದೇ ಕಾರ್ಯಕ್ರಮ ಪ್ರಸಾರಗೊಳ್ಳುತ್ತಿದ್ದು ರಾಷ್ಟ್ರೀಯ ಮಟ್ಟದಲ್ಲಿ ವ್ಯವಸ್ಥಿತವಾಗಿ ಒಪ್ಪ ಓರಣದೊಂದಿಗೆ ಪ್ರಶಂಸಿಸಲ್ಪಟ್ಟಿದೆ.
ವಿಶೇಷತೆ: ಉಚಿತ ಪ್ರವೇಶ, 30 ರಾಜ್ಯಗಳ ಪ್ರದೇಶವಾರು ಕೈಮಗ್ಗ, ಬಟ್ಟೆಗಳ ಮಹಾಮೇಳ ಉಡುಪಿಯ ಪದ್ಮಶಾಲಿ ನೇಕಾರರ ಪ್ರತಿಷ್ಠಾನದ ಸಹಕಾರದಲ್ಲಿ, ಕಲೆ, ಕರಕುಶಲ, ಆಭರಣಗಳು, ಗ್ರಹಲಂಕಾರ ವಸ್ತುಗಳು, ಇಂಡಿಯನ್ ಆರ್ಟಿಜನ್ ಬಜಾರ್ ಮೇಳದಂತೆ.
ಕೃಷಿಯಲ್ಲಿ ಬೀಜದಿಂದ ಮಾರುಕಟ್ಟೆವರೆಗಿನ ಇಸ್ರೇಲ್ ತಂತ್ರಜ್ಞಾನದ ಎಲ್ಲಾ ಸಮಗ್ರ ಚಿತ್ರಣ ಕೃಷಿ ಮೇಳದಲ್ಲಿ. ತುಳುನಾಡಿನ ಪರಂಪರಾಗತ, ದೇಸಿಯ ತಿನಿಸುಗಳ ವೈವಿಧ್ಯಮಯ ಆಹಾರಮೇಳ, ಗುಡಿ ಕೈಗಾರಿಕೆ, ರಾಜ್ಯ ವಸ್ತುಗಳ ಪ್ರದರ್ಶನ ಮೇಳ, ತರಹೇವಾರಿ ಫಲ-ಪುಷ್ಪ ಮೇಳ, ಕುಶಲ ಕಲಾವಿದರ ಸೃಜನಶೀಲ ಕಲಾ ಕೃತಿಗಳ ಲಲಿತ ಕಲಾಮೇಳ, ನೈಜ ಪರಿಸರ, ವನ್ಯಜೀವಿ, ಬುಡಕಟ್ಟು ಛಾಯಾಚಿತ್ರಗಳ ಕಲಾ ಕೃತಿ ಪ್ರದರ್ಶನ ಗಳೆಲ್ಲವೂ ಸ್ಕೌಟ್ಸ್ , ಗೈಡ್ಸ್ ರೋವರ್ಸ್, ರೇಂಜರ್ಸ್, ಗಳೆಲ್ಲರಿಗೂ ಮಾರ್ಗದರ್ಶನವನ್ನು ನೀಡುವ ಶಿಬಿರಗಳಾಗಿ ಒಂದು ವಾರ ಕಾಲ ತರಬೇತಿಯನ್ನೂ ಕೂಡ ಒಳಗೊಂಡಿರುತ್ತದೆ ಎಂದು ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ವಿವರಣೆಯನ್ನು ನೀಡಿದರು.
ಡಿ.10 ರಂದು ಸಂಜೆ 5:30ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಉಡುಪಿಯ ಜಿ ಶಂಕರ್ ಅಧ್ಯಕ್ಷತೆ ವಹಿಸಲಿರುವರು. ಸ್ಥಳೀಯ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಮಾಜಿ ಸಚಿವರು ಹಾಗೂ ಇತರರ ಮುಂದಾಳುಗಳು ಹಾಜರಿರುವರು.
ಸಂಜೆ 6.30 ರಿಂದ ರಾತ್ರಿ 9:30ರ ವರೆಗೆ ದೇಶೀಯ ವಿವಿಧ ಜಾನಪದ ಕಲಾವಿದರ ಭವ್ಯ ಸಾಂಸ್ಕೃತಿಕ ಮೆರವಣಿಗೆ, ವೇದ ಘೋಷ, ಭಜನೆ, ಪುಷ್ಪ ಪಲ್ಯಕ್ಕಿ, ಮಂಗಳವಾದ್ಯ, ವಿವಿಧ ದೇವರ ಮೆರವಣಿಗೆ, ವಿರಾಸತ್ ರಥ, ರಥಾರತಿ ನಡೆಯಲಿದೆ.
ಡಿ.11ರಂದು ಸಂಜೆ 5:45 ರಿಂದ 6:30 ವರೆಗೆ ಆಳ್ವಾಸ್ ವಿರಾಸತ್ 2024 ಪ್ರಶಸ್ತಿ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರಿಂದ ಪ್ರದಾನವಾಗಲಿದೆ. ತರುವಾಯ 7.30 ರವರೆಗೆ ವೆಂಕಟೇಶ್ ರಿಂದ ಹಿಂದುಸ್ತಾನಿ ಗಾಯನ ನಡೆಯಲಿದೆ. ರಾತ್ರಿ 7:45 ರಿಂದ ರಾತ್ರಿ 9ರವರೆಗೆ ವೈವಿಧ್ಯಮಯ ಜಾನಪದ ನೃತ್ಯ ವೈಭವ ನಡೆಯಲಿದೆ.
ಡಿ.12 ರಂದು ಸಂಜೆ 6 ರಿಂದ 8 ರವರೆಗೆ ವಿವಿಧ ಸಂಗೀತ, ನೃತ್ಯ ಕಾರ್ಯಕ್ರಮಗಳು, ರಾತ್ರಿ 9:15 ರಿಂದ ಆಳ್ವಾಸ್ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.
ಡಿ.13 ರಂದು ಸಂಜೆ 6 ರಿಂದ 8 ರವರೆಗೆ ನೀನಾದ್ರಿ ಕುಮಾರ್ ರಿಂದ ಸೌಂಡ್ ಆಫ್ ಇಂಡಿಯಾ, 8 15ರಿಂದ ಭರತನಾಟ್ಯ, ಕೂಚುಪುಡಿ, ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ.
ಡಿ.14 ರಂದು ಸಂಜೆ 6 ರಿಂದ 9ರವರೆಗೆ ಚೆನ್ನೈ ಸ್ಟೆಕೇಟೋ ಕಲಾವಿದರಿಂದ ಸಂಗೀತ ರಸದೌತಣ, ರಾತ್ರಿ 9ಕ್ಕೆ ಸಾಂಸ್ಕೃತಿಕ ರಥ ಸ್ವಸ್ಥಾನ ಗಮನ ನಡೆಯಲಿದೆ.
ಡಿ.15 ರಂದು ಕೃಷಿ ಮೇಳ, ಆಹಾರ ಮೇಳ, ಫಲ ಪುಷ್ಪ ಮೇಳ, ಕರಕುಶಲ ಪ್ರಾಚ್ಯ ವಸ್ತು ಪ್ರದರ್ಶನ, ಚಿತ್ರಕಲಾ ಮೇಳ, ಕಲಾ ಕೃತಿ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಮರಾಟ ಮಳಿಗೆಗಳ ಮಹಾವೀರ ದಿನವಿಡಿ ತೆರೆದಿರುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ತಿಳಿಸಿದರು.
ಭಾಗವಹಿಸುವ ಶಿಬಿರಾರ್ಥಿಗಳು ಡಿಸೆಂಬರ್ 9ರಂದು ಸಂಜೆ 5:00 ಒಳಗಾಗಿ ಮೂಡುಬಿದಿರೆ ಸ್ವರಾಜ್ಯ ಮೈದಾನದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನೋಂದಾವಣೆ ಮಾಡಿಕೊಳ್ಳಲು ಆಶಿಸಿದ್ದಾರೆ.