ಮೂಡುಬಿದಿರೆ: ದಕ್ಷಿಣ ಕೊರಿಯಾದ ಗುಮಿಯಲ್ಲಿ ನಡೆದ 26ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‍ ಶಿಪ್‍ನಲ್ಲಿ ಆಳ್ವಾಸ್ ಸ್ಪೋಟ್ರ್ಸ್‍ ಕ್ಲಬ್‍ನ ಆರು ಕ್ರೀಡಾಪಟುಗಳ ಭಾಗವಹಿಸಿ 3 ಚಿನ್ನ ಹಾಗೂ 3 ಬೆಳ್ಳಿಯ ಪದಕದೊಂದಿಗೆ ಆರು ಪದಕಗಳನ್ನು ಪಡೆದಿದ್ದಾರೆ. ಸ್ನೇಹ ಎಸ್ - 4*100ಮೀ ರಿಲೇ (ಚಿನ್ನ), ಶುಭ ಬಿ - 4*400ಮೀ ರಿಲೇ (ಬೆಳ್ಳಿ) ಮತ್ತು 4*400 ಮಿಕ್ಸ್‍ಡ್‍ ರಿಲೇ (ಚಿನ್ನ), ಸಚಿನ್ - ಜಾವೆಲಿನ್ ತ್ರೋ (ಬೆಳ್ಳಿ), ಸಂತೋಷ್‍ ಕುಮಾರ್ - 4*400 ಮಿಕ್ಸ್‍ಡ್‍ ರಿಲೇ (ಚಿನ್ನ), ರಿನ್ಸ್‍ ಜೋಸೆಫ್ - 4*400 ರಿಲೇ (ಬೆಳ್ಳಿ), ಪ್ರವೀಣ್ - ತ್ರಿವಿಧ ಜಿಗಿತದಲ್ಲಿ (ಬೆಳ್ಳಿ) ಪದಕವನ್ನು ಪಡೆದಿದ್ದಾರೆ. 

ಈ ಆರು ಕ್ರೀಡಾಪಟುಗಳು ಆಳ್ವಾಸ್ ಸ್ಪೋಟ್ರ್ಸ್‍ ಕ್ಲಬ್‍ನ ದತ್ತು ಸ್ವೀಕಾರದ ಕ್ರೀಡಾಪಟುಗಳಾಗಿದ್ದು ಹಿಂದೆ ನಡೆದಿರುವಂತಹ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ, ಪದಕ ವಿಜೇತರಾಗಿ, ಸಂಸ್ಥೆಗೆ ಕೀರ್ತಿತಂದಿರುತ್ತಾರೆ.

ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟ-2025

ಜರ್ಮನಿಯ ರಿಯಾನ್-ರೋಹೂರ್‍ನಲ್ಲಿ ಜುಲೈ 16ರಿಂದ 27ರ ವರೆಗೆ ನಡೆಯಲಿರುವ ವಲ್ರ್ಡ್‍ ಯುನಿವರ್ಸಿಟಿ ಗೇಮ್ಸ್ 2025 (ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟ-2025)ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾದತ್ತು ಯೋಜನೆಯ 11 ಕ್ರೀಡಾಪಟುಗಳು ಆಯ್ಕೆಯಾಗಿದ್ದು, ಇದರೊಂದಿಗೆ ಈ ವರೆಗೆ 32 ಕ್ರೀಡಾಪಟುಗಳು ಆಯ್ಕೆಯಾಗಿ ಆಳ್ವಾಸ್ ಸಂಸ್ಥೆಯ ಕ್ರೀಡಾಕ್ಷೇತ್ರದ ಸಾಧನೆ ಜಾಗತಿಕ ಮಟ್ಟದಲ್ಲಿ ಪಸರುವಂತೆ ಮಾಡಿದ್ದಾರೆ.  

ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.