ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮೂಡುಬಿದಿರೆ ಪುರಸಭೆಯ 20ನೇ ವಾರ್ಡ್ ಕರಿಂಜೆ ಗ್ರಾಮದ ಗ್ರಾಮಸ್ಥರು ಗಂಟಾಲ್ಕಟ್ಟೆ, ಗೋಗುಡ್ಡೆ, ಕಡಂ ಬೆಟ್ಟು, ಅಡಿಮಾರು, ಮಜ್ಜಿಬೈಲು, ಕಜೆಬೈಲು, ಬಿರಾವು ತಲುಪುವ ರಸ್ತೆಯು ಮತ್ತು ನೆಲ್ಲಿ ಗುಡ್ಡೆ ರಸ್ತೆ, ಕಡಂಬೆಟ್ಟು, ಮುರಾರ್ಜಿ ದೇಸಾಯಿ ವಸತಿ ಶಾಲೆ ರಸ್ತೆ, ಕರಿಂಜೆ- ತಾಕೊಡೆ ರಸ್ತೆಗಳು ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿದ್ದು ಮಾರ್ಗ ಎನ್ನುವುದೇ ತಿಳಿಯದಂತೆ ಬದಲಾಗಿರುತ್ತದೆ. 

ದಾರಿದೀಪಗಳು ಕೂಡ ಸಮರ್ಪಕವಾಗಿ ಇಲ್ಲದ ಕಾರಣ ಜನರಿಗೆ ಸಂಜೆಯ ತರುವಾಯ ನಡೆದಾಡಲು ಅಸಾಧ್ಯದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ ಎಂದು ಕರೆಂಗೆ ಗ್ರಾಮಸ್ಥರು ಪುರಸಭೆಯ ಮುಖ್ಯ ಅಧಿಕಾರಿಗಳಿಗೆ ಮನವಿಯನ್ನು ಫೆಬ್ರವರಿ 12ರಂದು ಅರ್ಪಿಸಿರುತ್ತಾರೆ. 15 ದಿನದೊಳಗೆ ರಸ್ತೆ, ದಾರಿದೀಪ ಸರಿಪಡಿಸದಿದ್ದಲ್ಲಿ ಪ್ರತಿಭಟನೆಯನ್ನು ನಡೆಸುವ ಎಚ್ಚರಿಕೆಯನ್ನು ನೀಡಿರುತ್ತಾರೆ