ವರದಿ ರಾಯಿ ರಾಜಕುಮಾರ ಮೂಡುಬಿದಿರೆ

ಮೂಡುಬಿದಿರೆ:  ಬೆಳುವಾಯಿ ಗ್ರಾಮ ಪಂಚಾಯತ್ ನ ದ್ವಿತೀಯ ಸುತ್ತಿನ ಗ್ರಾಮ ಸಭೆ ಫೆಬ್ರವರಿ 17ರಂದು ಬೆಳಿಗ್ಗೆ ಹತ್ತೂವರೆ ಗೆ ನಿಗದಿಯಾಗಿತ್ತು. ಸಭೆ ಗಂಟೆ 11.15 ಆದರೂ ಪ್ರಾರಂಭವಾಗಲಿಲ್ಲ. 

ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸ್ರ್ತೀಶಕ್ತಿ ಗುಂಪುಗಳ ಸದಸ್ಯರ ಹೊರತು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಹಾಜರಿದ್ದರು. ಮೂರು ಇಲಾಖೆಗಳ ಅಧಿಕಾರಿಗಳು ಬಿಟ್ಟು ಉಳಿದ ಇಲಾಖೆಯ ಅಧಿಕಾರಿಗಳು ಕೂಡ ಗೈರು ಹಾಜರಾಗಿದ್ದರು. ಕೋರಂ ಕೊರತೆಯ, ಹಾಗೂ ಅಧಿಕಾರಿಗಳ ಅನುಪಸ್ಥಿತಿ ಕಾರಣ ನೀಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಕೆ ಪೂಜಾರಿ ಫೆಬ್ರವರಿ 25 ಕ್ಕೆ ಸಭೆಯನ್ನು ಮುಂದೂಡಿದರು.