ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳ್ಳುತ್ತಿದೆ. ಅದರ ವಿಶಾಲ ಹೊರ ಆವರಣ ಸಾರ್ವಜನಿಕರ ಮುತುವರ್ಜಿಯಿಂದ ಇನ್ನಷ್ಟು ಸುಂದರವಾಗಿ ರೂಪುಗೊಳ್ಳುತ್ತಿದೆ. ರಾತ್ರಿ-ಹಗಲು ಆಸಕ್ತರು ವಿವಿಧ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ತಡ ರಾತ್ರಿ ಕೂಡಾ ನೀರು ಹಾಕಿ ಮಣ್ಣು ಸಮತಟ್ಟು ಮಾಡಿ ಇಂದಿನ ಚಪ್ಪರ ಮುಹೂರ್ತಕ್ಕೆ ಸಜ್ಜುಗೊಳಿಸುವ ಕೆಲಸವನ್ನು ಮಾಡಿರುತ್ತಾರೆ.
ಫೆಬ್ರವರಿ 3 ರಂದು ನಡೆದ ಚಪ್ಪರ ಮುಹೂರ್ತ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಕುಲದೀಪ್ ಎಂ, ಪ್ರಧಾನ ಅರ್ಚಕ ಅಡಿಗಳ್ ಅನಂತ ಕೃಷ್ಣ ಭಟ್, ಜೀರ್ಣೋದ್ಧಾರ ಸಮಿತಿಯ ವೀರೇಂದ್ರ ಎಂ, ಶಿವಪ್ರಸಾದ್ ಆಚಾರ್, ಧನ ಕೀರ್ತಿ ಬಲಿಪ, ಶ್ರೀಕಾಂತ್ ರಾವ್, ಶ್ರೀಪತಿ ಭಟ್, ವಿದ್ಯಾ ರಮೇಶ್ ಭಟ್, ನೀಲೇಶ್ ಶೆಟ್ಟಿ, ಸುದರ್ಶನ ಎಂ, ದೇವಾಲಯದ ಅರ್ಚಕರು, ಪುರೋಹಿತರು ಮತ್ತು ಹಲವಾರು ನಾಗರಿಕರು ಹಾಜರಿದ್ದರು. ಸಾರ್ವಜನಿಕರು ಸ್ವತಃ ಚಪ್ಪರದ ಮುಖ್ಯ ಕಂಬವನ್ನು ಏರಿಸಿ ಸಂಭ್ರಮ ಪಟ್ಟರು.