ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕು ನೆಲ್ಲಿಕಾರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ನ ಚಾರ್ಲ್ಸ್ ಸಾಂತ್ ಮೇರ್ 583 ಮಾತುಗಳೊಂದಿಗೆ ಆಯ್ಕೆ ಆಗಿರುತ್ತಾರೆ. ಅವರ ಪ್ರತಿ ಸ್ಪರ್ಧಿ ರಾಜೇಶ್ 405 ಮಾತುಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಸುಮಾರು 14 ಮಾತುಗಳು ಅಸಿಂಧುಗೊಂಡಿರುವ ಸಂಗತಿ ಬಹಳಷ್ಟು ಚಿಂತಿಸುವ ಸಂಗತಿ.



ಮೂಡುಬಿದಿರೆ ತಾಲೂಕು ಕಚೇರಿ ಎದುರು ಚಾರ್ಲ್ಸ್ ರನ್ನು ಮೂಡುಬಿದಿರೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರವೀಣ್ ಕುಮಾರ್ , ನೆಲ್ಲಿಕರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ, ಸದಸ್ಯರುಗಳಾದ ಲಲಿತ, ಮೋಹಿನಿ, ಮುಖೇಶ್ ಪೂಜಾರಿ, ಪ್ರವೀಣ್ ಭಟ್ ಮಾಂಟ್ರಾಡಿ, ಶಿವನಂದ ಅಳಿಯೂರು, ಮೂಡುಬಿದಿರೆ ಪುರಸಭೆ ಸದಸ್ಯ ಸುರೇಶ್ ಕೋಟ್ಯಾನ್ ಹಾಗೂ ಇತರರು ಅಭಿನಂದಿಸಿದರು.