ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬ ನ. 25ರಂದು ಆಚರಿಸಲಾಯಿತು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಪೆರಿಂಜೆ ಶ್ರೀ ಕ್ಷೇತ್ರ ಪಡ್ಡಾ ರಬೆಟ್ಟ ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನದ ಆನುವಂಶೀಯ ಆಡಳಿತದಾರ ಎ. ಜೀವಂಧರ ಕುಮಾರ್, ನಾಡಿನ ಗಣ್ಯರು, ಹೆಗ್ಗಡೆಯವರ ಅಭಿಮಾನಿಗಳು, ಕ್ಷೇತ್ರದ ಭಕ್ತರು, ಸಂಘ-ಸAಸ್ಥೆಯವರು, ಕ್ಷೇತ್ರದ ಸಂಸ್ಥೆಗಳ ಅಧಿಕಾರಿಗಳು, ನೌಕರರು ಊರ ಪರ ಊರ ನಾಗರಿಕರು, ಧರ್ಮಸ್ಥಳ ಸೇರಿದಂತೆ ತಾಲೂಕಿನ ಪೇಟೆಯ ವರ್ತಕರು, ನಾಗರಿಕರು ಕ್ಷೇತ್ರಕ್ಕೆ ಬಂದು ಹೆಗ್ಗಡೆಯವರಿಗೆ ಭಕ್ತಿ ಪೂರ್ವಕ ಶುಭಾಶಯ, ಗೌರವವನ್ನು ಸಲ್ಲಿಸಿದರು.