ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅವರು ತಮ್ಮ ಸುಮಧುರ 73 ವಸಂತಗಳ ಮೆಲುಕನ್ನು ಹಂಚಿಕೊಂಡರು. ಮನೆಯಿಂದ ದೂರವಿಟ್ಟು ತಂದೆ ನಮ್ಮೆಲ್ಲರನ್ನೂ ಬೆಳೆಸಿದ್ದರು. ಆದರೆ ಆಚಾರ, ವಿಚಾರ, ವ್ಯವಹಾರ ಶುದ್ಧ ವಾಗಿರಿಸಲು ಎಚ್ಚರಿಸುತ್ತಿದ್ದರು. 1981ರಿಂದ ಪ್ರಾರಂಭಗೊಂಡ ವೈದ್ಯಕೀಯ ಬದುಕು ಬಯಲು ಶಾಲೆಯ ಕ್ರೀಡೆ, ಕಲೆಗಳ ಭರಪೂರ ಬೆಂಬಲ ಶೋಭಾವನ, ವಿದ್ಯಾಗಿರಿಗಳನ್ನು ಬೆಳೆಸಿದೆ. ಬಯಲು ಶಾಲೆಯ ಕಲಿಕೆ ಎಲ್ಲರನ್ನೂ, ನನ್ನ ಕುಟುಂಬದವರಂತೆ ಅಪ್ಪಿಕೊಳ್ಳುವದಕ್ಕೆ ಪ್ರೇರೇಪಿಸಿತು. ನಿನ್ನೆಯಷ್ಟೇ ಮೆಡಿಕಲ್ ಕಾಲೇಜು ಭೂಮಿ ಪೂಜೆ ನೆರವೇರಿಸಿದ್ದು ಎಲ್ಲರ ಸಹಕಾರ ಯಾಚಿಸಿದರು.

ಅವರು ಮಾತಿನ ತರುವಾಯ 73 ಚಿಕ್ಕ ಪುಟಾಣಿಗಳು ಗುಲಾಬಿ ನೀಡಿದಾಗ ಅವರೆಲ್ಲರಿಗೂ ಚಾಕಲೇಟ್ ನೀಡಿ ಅಭಿನಂದಿಸಿದರು. ಅದೇ ಸಮಯದಲ್ಲಿ ಪಟ್ಲ ಸತೀಶ್ ಶೆಟ್ಟಿಯವರು ಯಕ್ಷಗಾನ ಹಾಡಿನ ಮೂಲಕ ಮೋಹನ ಸಾಧನೆಯನ್ನು ಪ್ರಸ್ತುತಪಡಿಸಿದರು. ವೇಣುಗೋಪಾಲ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.