ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಟಿ ವಿ ವಿಕ್ರಮ, ಪೋಸ್ಟ್ ಕಾರ್ಡ್ ನ್ಯೂಸ್ ಮುಖ್ಯಸ್ಥ ಮಹೇಶ್ ವಿಕ್ರಂ ಹೆಗಡೆ ಬಂಧನವನ್ನು ವಿರೋಧಿಸಿ ಮೂಡುಬಿದೆನೆಯ ಹೆಸರಾಂತ ಹನುಮಂತ ದೇವಾಲಯದಲ್ಲಿ ಇಂದು ಹಿಂದೂ ಪ್ರಮುಖರು ಸಾಮೂಹಿಕ ಪ್ರಾರ್ಥನೆ, ರಾಮ ತಾರಕ ಮಂತ್ರ, ಹಾಗೂ ಹನುಮಾನ್ ಚಾಲೀಸಾ ಪಠಿಸಿದರು.
ಈ ಕಾರ್ಯಕ್ರಮದಲ್ಲಿ ಹಿಂದೂ ಪ್ರಮುಖರಾದ ಸುದರ್ಶನ್ ಎಂ, ದಿನೇಶ್ ಪುತ್ರನ್, ಜಗದೀಶ್ ಅಧಿಕಾರಿ, ನಾಗರಾಜ ಪೂಜಾರಿ, ಪ್ರಸಾದ್ ಕುಮಾರ್, ವಸಂತ ಗಿಳಿಯಾರ್, ವಿನಯಕುಮಾರ್ ಹಾಗೂ ಇತರರು ಪಾಲ್ಗೊಂಡಿದ್ದರು. ನಾಳೆಯ ದಿನ ಮೂಡುಬಿದಿರೆ ಕೋರ್ಟ್ ನಲ್ಲಿ ಈ ಬಗ್ಗೆ ಮುಂದಿನ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.