ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ ತಾಲೂಕು ಮರಾಟಿ ಸಮಾಜ ಸೇವಾ ಸಂಘದ, ಚಾರಿಟೇಬಲ್ ಟ್ರಸ್ಟ್, ಮಹಿಳಾ ವೇದಿಕೆ, ಯುವ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಸೆಪ್ಟೆಂಬರ್ 14 ರಂದು ಸಮಾಜ ಮಂದಿರದಲ್ಲಿ ನಡೆಯಿತು. 

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರಕಾಶ್ ನಾಯ್ಕ್, ಅಂಚೆ ಇಲಾಖೆಯಲ್ಲಿ ಉತ್ತಮ ಡಾಕ್ ಸೇವಕ ಪ್ರಶಸ್ತಿ ಪಡೆದ ಉಮೇಶ್ ನಾಯ್ಕ, ಉತ್ತಮ ಕೃಷಿಕ ಸಹಕಾರಿ ನಿರ್ದೇಶಕ ಮೂಡು ಕೊಣಾಜೆ ಉಮೇಶ್ ನಾಯ್ಕ, ಪ.ಪೂ.ಕಾ.ಪ್ರಾಂಶುಪಾಲರಾಗಿ ಪದೋನ್ನತ ಶ್ರೀನಿವಾಸ ಯಶೋದಾ ನಾಯ್ಕ, ರಾಜ್ಯ ಮಟ್ಟದ ಸಮಾವೇಶದ ನೇತಾರ ಮಹಾಲಿಂಗ ಶಾಲಿನಿ ನಾಯ್ಕ, ನಿವೃತ್ತ ಅರಣ್ಯ ಇಲಾಖೆಯ ಉನ್ನತ ಅಧಿಕಾರಿ ಡಾ ಸುಂದರ ನಾಯ್ಕ್ ರವರುಗಳನ್ನು ಸನ್ಮಾನಿಸಲಾಯಿತು. ಆಳ್ವಾಸ್ ನ ಡಾ ಗಣೇಶ ನಾಯ್ಕ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಗೈದರು.

ಸನ್ಮಾನಿತರ ಪರವಾಗಿ ಮಾತನಾಡಿದ ಶ್ರೀನಿವಾಸ ನಾಯ್ಕ್ ಸಾಧಕರನ್ನು ಗುರುತಿಸಿ, ಸಮಾಜವನ್ನು ಐಕ್ಯ ಬಾಂಧವ್ಯದಿಂದ ಒಗ್ಗೂಡಿಸಲು ಪ್ರಯತ್ನಿಸಿದುದು ಸ್ತುತ್ಯಾರ್ಹ ಎಂದರು. ಶಾಲಿನಿ ನಾಯ್ಕ ರವರು ಮಕ್ಕಳಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಬೆಳೆಸಿ. ಆರೋಗ್ಯಕ್ಕೆ ಯೋಗ, ಧ್ಯಾನ ಕಲಿಸಿ ಎಂದು ಕೇಳಿಕೊಂಡರು. ಅಧ್ಯಕ್ಷ ಶಂಕರ ನಾಯ್ಕ ಅಧ್ಯಕ್ಷತೆ ವಹಿಸಿ ಸಂಘಕ್ಕಾಗಿ ಸ್ಪಂದನೆ ಇರಲಿ ಎಂದು ಕೇಳಿಕೊಂಡರು. ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೈತ್ರಿ, ಆಶಿತ್, ಅಪರ್ಣಾ ಹಾಗೂ ಪಿಯು ನಲ್ಲಿ ಅತಿ ಹೆಚ್ಚು ಅಂಕ ಪಡೆದ ನಿರಂಜನ, ಜೀವನ್, ಭಾಗ್ಯಶ್ರೀ, ಸುಕನ್ಯರನ್ನು ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವಿಸಲಾಯಿತು. ಎಲ್ಲಾ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ಸಾಮಗ್ರಿ ವಿತರಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಅಧ್ಯಕ್ಷ ಸುಂದರ ನಾಯ್ಕ, ಸುರೇಶ್ ನಾಯ್ಕ, ಪ್ರಭಾಮಣಿ, ಸುಜಾತಾ ಹಾಜರಿದ್ದರು.

ರಾಮಚಂದ್ರ ಕೆಂಬಾರೆ ಸ್ವಾಗತಿಸಿದರು. ಚಂದ್ರಯ್ಯ, ಶುಭಾ ಅಭಿನಂದನಾ ಪತ್ರ ವಾಚಿಸಿದರು. ಪ್ರಕಾಶ್ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು. ಶೀನ ನಾಯ್ಕ ವಂದಿಸಿದರು.