ಮೂಡುಬಿದಿರೆ: 'ಪರಿಸರ ಉಳಿಸಿ, ಪರಿಸರ ಬೆಳೆಸಿ' ಎನ್ನುವ ಉಕ್ತಿಯಂತೆ ಎಕ್ಸಲೆಂಟ್ ಸಿಬಿಎಸ್ಇ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ವನಮಹೋತ್ಸವ ಕಾರ್ಯಕ್ರಮವನ್ನು ಪಡ್ಡಂದಡ್ಡ ಗ್ರಾಮದ ಪರಿಸರ ಪ್ರೇಮಿ ಪ್ರಸನ್ನರವರ ಮನೆಯ ಸುತ್ತಮುತ್ತಲಿನ ವಿಶಾಲ ಪರಿಸರದಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು. 

ಈ ಕಾರ್ಯಕ್ರಮ ಮೂಲ ರೂವಾರಿ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ರವರು ಸ್ವತಃ ತಾವೇ ಗಿಡವನ್ನು  ನೆಡುವ ಮೂಲಕ ಮಕ್ಕಳಿಗೆ ಪರಿಸರದ ಹಾಗೂ ವನಸಂಪತ್ತಿನ ಉಳಿವಿನ ಅರಿವು ಮೂಡಿಸಿದರು. ಪರಿಸರ ಪ್ರೇಮಿಯಾದ ಪ್ರಸನ್ನ ರವರು ಮಾತನಾಡಿ 'ಪ್ರಕೃತಿಯ ಉಳಿವು ನಮ್ಮೆಲ್ಲರ ಉಳಿವು' ಪರಿಸರವನ್ನು ಸಂರಕ್ಷಿಸುವುದು  ಪ್ರತಿಯೊಬ್ಬರ ಆಧ್ಯ ಕರ್ತವ್ಯ ಎಂದು ಮಕ್ಕಳಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಸನ್ನರವರ ಪುತ್ರಿಯಾದ  ಹೇಮಲತಾ ರವರು ಉಪಸ್ಥಿತರಿದ್ದರು. ಶಿಕ್ಷಕಿಯಾದ ಪ್ರಜ್ಞಾರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು .