ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಪಿಂಚಣಿದಾರರ ಮಾಸಿಕ ಸಭೆಯಲ್ಲಿ ಗುಡ್ಡೆಯಂಗಡಿ ಶಾಲಾ ನಿವೃತ್ತ ಶಿಕ್ಷಕ ಇಂದು ಎಸ್ ಮಂಗಳೂರು ನಾಟಕ ರಚನೆಕಾರ, ರಂಗ ಕಲಾವಿದ, ಸಂಗೀತ ಹಾಡುಗಾರ ವಿಶೇಷ ಆಹ್ವಾನಿತರಾಗಿದ್ದು ತಮ್ಮ ಹಲವಾರು ಅನುಭವಗಳನ್ನು ಪಿಂಚಣಿ ದಾರರ ಸಭೆಯಲ್ಲಿ ಹಂಚಿಕೊಂಡರು. 

ಈ ಕಾರ್ಯಕ್ರಮ ಸಮಾಜ ಮಂದಿರದಲ್ಲಿ ಫೆಬ್ರುವರಿ 15 ರಂದು ನಡೆಯಿತು. ವೇದಿಕೆಯಲ್ಲಿ ಅಧ್ಯಕ್ಷ ಟಿ.ಎನ್. ಕೆಂಬಾರೆ, ಕಾರ್ಯದರ್ಶಿ ಎಲ್.ಜೆ. ಫೆರ್ನಾಂಡಿಸ್, ಮುಖ್ಯ ಅತಿಥಿ ಆಳ್ವಾಸ್ ನ ಜೀವನ್ ರಾಂ ಸುಳ್ಯ ಹಾಜರಿದ್ದರು.