ವರದಿ ರಾಯಿ ರಾಜಕುಮಾರ್
ಮೂಡುಬಿದರೆ ತಾಲೂಕಿನ ಪೊನ್ನೆಚಾರಿ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಾರದ ಪೂಜಾ ಮಹೋತ್ಸವ ಸೆ. 29 ಮತ್ತು 30 ರಂದು ನಡೆಯಲಿದೆ. 29 ರಂದು ಗಣ ಹೋಮ, ಚಿತ್ರಕಲಾ ಸ್ಪರ್ಧೆ, ಅಕ್ಷರಾಭ್ಯಾಸ, ಭಕ್ತಿ ಗೀತೆ ಸ್ಪರ್ಧೆ, ಗುಂಪು ನೃತ್ಯ ಸ್ಪರ್ಧೆ, ರಾತ್ರಿ ರಂಗ ಪೂಜೆಯ ತರುವಾಯ ಕುಟ್ಟ್ಯಣ್ಣನ ಕುಟುಂಬ ಹಾಸ್ಯಮಯ ನಾಟಕ ನಡೆಯಲಿದೆ.
30ರಂದು ಸೌಭಾಗ್ಯ ಸೂಕ್ತ ಪಠಣ, ಪಂಚ ದುರ್ಗ ಹವನ, ಮುದ್ದು ಶಾರದೆ ಸ್ಪರ್ಧೆ, ಸಾಮೂಹಿಕ ಕುಂಕುಮಾರ್ಚನೆ ಇತ್ಯಾದಿಗಳು ನಡೆದು ಸಂಜೆ ವಿಸರ್ಜನಾ ಪೂಜೆಯ ತರುವಾಯ ವೈಭವದ ಶೋಭಾ ಯಾತ್ರೆಯಲ್ಲಿ ಶಾರದಾ ದೇವಿಯ ವಿಗ್ರಹವನ್ನು ಜಲ ಸ್ತಂಭನ ಗೊಳಿಸಲಾಗುವುದು ಎಂದು ಲಕ್ಷ್ಮಿ ವೆಂಕಟರಮಣ ದೇವಾಲಯದ ಆಡಳಿತ ಮುಕ್ತೈಸರ ಎಂ ಪಿ ಅಶೋಕ್ ಕಾಮತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿಯನ್ನು ಪಡೆದ ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಬ್ಯಾಂಕಿನ ಅಧ್ಯಕ್ಷ ಎಂಬ ಬಾಹುಬಲಿ ಪ್ರಸಾದ್ ಅವರಿಗೆ ಶಾರದಾ ಅನುಗ್ರಹ ಪ್ರಶಸ್ತಿ ಹಾಗೂ ಮೂಡುಬಿದಿರೆಯ ಹಿರಿಯ ದಂತ ವೈದ್ಯ ಸಮಾಜ ಸೇವಕ ಡಾ. ವಿನಯ್ ಕುಮಾರ್ ಹೆಗ್ಡೆ ಅವರಿಗೆ ಸಿರಿಪುರ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಶಿರೂರು, ದೇವಾಲಯದ ಭಜಕವೃಂದದ ಪರವಾಗಿ ಪುರಸಭಾ ಸದಸ್ಯ ಸುರೇಶ್ ಪ್ರಭು, ಹರೇ ರಾಮ್, ಹಾಜರಿದ್ದರು