ಮುಂಬಯಿ, ಸೆ.26: ರಂಗಭೂಮಿಯ ಹಲವಾರು ನಾಟಕಗಳು ಹಾಗೂ ಕೊಂಕಣಿ ಹಾಡುಗಳ ಸಂಗೀತ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಕರ್ನಾಟಕ ಕರಾವಳಿಯ ಪ್ರತಿಭಾನ್ವಿತ ಕಲಾವಿದ ಲಾನ್ಸಿ ಅಬ್ರಹಾಂ ಡಿಸೋಜಾ ನಿಡ್ಡೋಡಿ ಅವರು ಹಲವಾರು ಮತ್ತೆ ಜನರನ್ನು ನಗಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಅದಕ್ಕಾಗಿ ಪರಿಹಾಸ್ಯದ ಚಿಂತನೆ ನಡೆಸಿ ಹಾಸ್ಯಲೋಕಕ್ಕೆ ಹೊಸ ಪ್ರಯೋಗವನ್ನು ನೀಡುವ ನಿಟ್ಟಿನಲ್ಲಿ ಸಕ್ರೀಯರಾಗಿ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.
ತನ್ನ "ದಿ ಏಂಜಲ್ ಫಿಲ್ಮ್ಸ್" ಬ್ಯಾನರ್ ಅಡಿಯಲ್ಲಿ "ಜರಾ ಹಟ್ಕೆ" ಎಂದು ಕಾರ್ಯಕ್ರಮದ ಶೀರ್ಷಿಕೆ ಇರಿಸಿ ಹಾಸ್ಯಮಯ ಕಾರ್ಯಕ್ರಮ ಸಿದ್ಧ ಪಡಿಸಿದ್ದಾರೆ. ಇತ್ತೀಚೆಗೆ "ಜರಾ ಹಟ್ಕೆ" ಈ ಕಾರ್ಯಕ್ರಮಕ್ಕೆ ಮುಹೂರ್ತ ನೆರವೇರಿಸಲಾಗಿದ್ದು, ಈ ಇದೇ ಸೆಪ್ಟೆಂಬರ್ 27ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಇದು ಶೀಘ್ರದಲ್ಲೇ ಕಾಮಿಡಿ ಟಿವಿ ಚಾನೆಲ್‍ಗಳಲ್ಲಿ ಪ್ರಸಾರವಾಗಲಿದೆ.
ಪ್ರಸನ್ನ ನಿಡ್ಡೋಡಿ ಮತ್ತು ಸಾಗರ್ ವಡೆಕರ್ ಅವರ ಕಥೆ ನಿರ್ಮಾಣದಲ್ಲಿ ನಿರ್ಮಿಸಲ್ಪಡುವ ಈ "ಜರಾ ಹಟ್ಕೆ" ಕಾರ್ಯಕ್ರಮ ಲಾನ್ಸಿ ಅಬ್ರಹಾಂ ಡಿಸೋಜಾ ನಿಡ್ಡೋಡಿ ಮತ್ತು ದತ್ತಾರಾಮ ಕಾದಂ ನಿರ್ಮಾಪಕತ್ವದಲ್ಲಿ ಪ್ರಸರಣ ಕಾಣಲಿದೆ. ಎಲ್ಲಾ ಸಂಚಿಕೆಗಳನ್ನು ಸಾಗರ್ ವಡೆಕರ್ ಅವರು ನಿರ್ದೇಶನ ಹಾಗೂ ಶೇರ್ ಅಲಿ ಡಿಒಪಿಯಲ್ಲಿ ದಲ್ಲಿ ಸಿದ್ಧಗೊಳ್ಳಲಿದ್ದು ವಿಸನ್ ಮ್ಯೂಸಿಕ್ ಅನ್‍ಲಿಮಿಟೆಡ್ ಮಾಧ್ಯಮ ಪಾಲುದಾರಿಕೆಯಲ್ಲಿ ಪ್ರಸರಣ ಕಾಣಲಿದೆ. ಮುಹೂರ್ತ ಕಾರ್ಯಕ್ರಮದಲ್ಲಿ ಎಲ್ಲಾ ಕಲಾವಿದರು ಹಾಗೂ ಅತಿಥಿಗಳು ಹಾಜರಿದ್ದರು.