ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ( ಸ್ವಾಯತ್ತ ) ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ರಾಮಕೃಷ್ಣ ಶೆಟ್ಟಿಯವರು ಮಂಡಿಸಿದ "ಕರಾವಳಿ ಕರ್ನಾಟಕದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯತಂತ್ರಾತ್ಮಕ ಮಾನವ ಸಂಪನ್ಮೂಲ ನಿರ್ವಹಣೆಯ ಕುರಿತ ಅಧ್ಯಾಪಕರ ಅಭಿಪ್ರಾಯದ ಅಧ್ಯಯನ"ಎಂಬ ಸಂಶೋಧನ ಮಹಾ ಪ್ರಬಂಧಕ್ಕೆ ಕೊಯಮತ್ತೂರಿನ ಭಾರತೀಯಾರ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಇವರ ಸಂಶೋಧನೆಗೆ ಉಡುಪಿ ಯ ಶಿರ್ವ ಸೈಂಟ್ ಮೇರಿಸ್ ಕಾಲೇಜಿನ ನಿವೃತ್ತ ವಾಣಿಜ್ಯ ಪ್ರಾಧ್ಯಾಪಕ ಡಾ. ಎಸ್. ಗಣೇಶ್ ಭಟ್ ಮಾರ್ಗದರ್ಶನ ನೀಡಿದ್ದರು.