ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:  ಸ್ಥಳೀಯ ರೋಟರಿ ಸಂಸ್ಥೆಯವರು ಡಿ. 22 ರಂದು ರೋಟೋ ಕನೆಕ್ಟ್ ಎಂಬ ವಿಶಿಷ್ಟ ಜನೋಪಯೋಗಿ ಅರಿವು ಮೂಡಿಸುವ ಕಾರ್ಯಗಳು ಸಿದ್ದಕಟ್ಟೆ ಹಾಗೂ ಎಡಪದವಿನಲ್ಲಿ ಜರಗಿತು . 

ಸಂಪನ್ಮೂಲ ವ್ಯಕ್ತಿಗಳಾಗಿ ರೋ. ಡಾ. ಪ್ರಸನ್ನ ಕಾಕುಂಜೆ ಇವರು ಜೀವನ ಶೈಲಿ ಬದಲಾವಣೆ ಹಾಗೂ ಆಹಾರ ಪದ್ಧತಿ ಎಂಬ ವಿಷಯದ ಬಗ್ಗೆ ಅರಿವು ಮೂಡಿಸಿದರು . ಸೈಬರ್ ಫಾರೆನ್ಸಿಕ್ ತಜ್ಞರಾದ ಶಶಿಧರ ಪಟ್ಗಾರ್ ರವರು  ಸೈಬರ್ ಕ್ರೈಂ. ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದರು. ಗುರುಪ್ರಸಾದ್ ಕೆ ಎಸ್ ರವರು ಪೋಸ್ಟಲ್ ಸೇವೆಗಳಲ್ಲಿ ಜನಸಾಮಾನ್ಯರಿಗೆ ಸಿಗುವ ಲಾಭಗಳ ಬಗ್ಗೆ ವಿವರಿಸಿದರು . ಎರಡೂ ಕಾರ್ಯಕ್ರಮದಲ್ಲಿ ಅಧಿಕ ಜನರು ಆಗಮಿಸಿದ್ದರು. ಕಾರ್ಯಕ್ರಮವನ್ನು ರೋಟರಿ ಎಜುಕೇಷನ್  ಸೊಸೈಟಿಯ ಕಾರ್ಯದರ್ಶಿ ರೋ. ಎ.ಕೆ ರಾವ್ ದೀಪ ಬೆಳಗಿಸುವ ಮೂಲಕ  ಉದ್ಘಾಟಿಸಿ ರೋಟರಿ ಸಂಸ್ಥೆಗಳ ಧ್ಯೇಯೋದ್ದೇಶವನ್ನು ತಿಳಿಸಿದರು. ಶಾಲಾ ಸಂಚಾಲಕ  ರೋ.ಪ್ರವೀಣ್ ಚಂದ್ರ ಜೈನ್ , ರೋ ಡಾ ಸುದೀಪ್ ,ರೋ ಸೂರಜ್ ಬನ್ನಡ್ಕ ,ಮುಖ್ಯೋಪಾಧ್ಯಾಯಿನಿ ತಿಲಕ್ ಅನಂತವೀರ ಜೈನ್ , ಆಡಳಿತಾಧಿಕಾರಿ ಪ್ರಫುಲ್ ಡಿಸೋಜಾ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಹಾಜರಿದ್ದು , ಮಾಲತಿ ಹಾಗೂ ಜಯಂತಿರವರು ಕಾರ್ಯಕ್ರಮ ನಿರೂಪಿಸಿದರು.