ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸ್ಥಳೀಯ ಸ್ಪೂರ್ತಿ ವಿಶೇಷ ಶಾಲೆಯ ಮಕ್ಕಳು ರಾಜ್ಯಮಟ್ಟದ ಪ್ರೇರಣಾ ನೃತ್ಯೋತ್ಸವ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ.
ಬೆಳಗಾವಿಯ ಚಿಕ್ಕೋಡಿಯಲ್ಲಿ ಡಿಸೆಂಬರ್ 28ರಂದು ಈ ರಾಜ್ಯ ಮಟ್ಟದ ಸ್ಪರ್ಧೆ ನಡೆದಿತ್ತು. ಪ್ರಶಸ್ತಿ ಪಡೆದ ಎಲ್ಲ ಮಕ್ಕಳನ್ನು, ತರಬೇತುಗೊಳಿಸಿದ ಶಿಕ್ಷಕರನ್ನು ಸ್ಪೂರ್ತಿ ಶಾಲೆಯ ಸಂಚಾಲಕ ಪ್ರಕಾಶ್ ಶೆಟ್ಟಿಗಾರ್ರು ಅಭಿನಂದಿಸಿದ್ದಾರೆ.