ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಉಡುಪಿ ಜಿಲ್ಲೆಯ ಅಜ್ಜರ ಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅಂತರ್ಜಿಲ್ಲಾ, ಅಂತರ ವಿಶ್ವವಿದ್ಯಾಲಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 22ನೇ ಬಾರಿ ಸಮಗ್ರ ತಂಡ ಪ್ರಶಸ್ತಿಯನ್ನು ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ದ್ವಿತೀಯ ಸ್ಥಾನಿಗಿಂತ 460 ಅಂಕಗಳ ಅಂತರ ಪಡೆದು 11 ನೂತನ ಕೂಟ ದಾಖಲೆಯನ್ನು ಆಳ್ವಾಸ್ ವಿದ್ಯಾರ್ಥಿಗಳು ನಿರ್ಮಿಸಿರುವುದು ಐತಿಹಾಸಿಕ ಸಾರ್ವಕಾಲಿಕ ದಾಖಲೆಯ ಸಾಧನೆಯಾಗಿದೆ.
ಅಪ್ರತಿಮ ಸಾಧನೆ ಮೆರೆದ ಭಾರತದ ಏಕೈಕ ಕಾಲೇಜು-ಆಳ್ವಾಸ್:
ಅಥ್ಲೆಟಿಕ್ಸ್ ನ ಒಟ್ಟು 47 ವಿಭಾಗಗಳಲ್ಲಿಯೂ ನೂತನ ಕೂಟ ದಾಖಲೆಯನ್ನು ನಿರ್ಮಿಸಿದ ಭಾರತದ ಏಕೈಕ ಕಾಲೇಜು ಆಳ್ವಾಸ್. ಜಿಲ್ಲಾ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದಲ್ಲಿ 292 ಚಾಂಪಿಯನ್ಶಿಪ್ ಅಂಕಗಳು ಹಾಗೂ ಮಹಿಳೆಯರ ವಿಭಾಗದಲ್ಲಿ 277 ಚಾಂಪಿಯನ್ಶಿಪ್ ಅಂಕಗಳನ್ನು ಪಡೆದು ಆಳ್ವಾಸ್ ಒಟ್ಟು 5069 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿತು.
ಆಳ್ವಾಸ್ ಕಾಲೇಜು ಪುರುಷರ ವಿಭಾಗದಲ್ಲಿ 24 ಚಿನ್ನ, 17 ಬೆಳ್ಳಿ, ಒಂದು ಕಂಚಿನ ಪದಕ ಸೇರಿ 42 ಪದಕಗಳು ಹಾಗೂ ಮಹಿಳಾ ವಿಭಾಗದಲ್ಲಿ 21 ಚಿನ್ನ, 16 ಬೆಳ್ಳಿ, ಹಾಗೂ 5 ಕಂಚಿನ ಪದಕದೊಂದಿಗೆ 42 ಪದಕಗಳನ್ನು ತನ್ನದಾಗಿಸಿಕೊಂಡು ಒಟ್ಟಾರೆ 84 ಪದಕಗಳೊಂದಿಗೆ ಮಿಂಚಿದ ಏಕೈಕ ಕಾಲೇಜು ಆಳ್ವಾಸ್ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಛೇರ್ಮನ್ ಎಂ ಮೋಹನ್ ಆಳ್ವ ನುಡಿದರು.
ಆಳ್ವಾಸ್ ಸಂಸ್ಥೆಯಲ್ಲಿ ಪತ್ರಕರ್ತರೊಂದಿಗೆ ಡಿಸೆಂಬರ 2 ರಂದು ಮಾತನಾಡಿದ ಆಳ್ವರು 44 ವರ್ಷದ ಕ್ರೀಡಾಕೂಟದ ಇತಿಹಾಸದಲ್ಲಿ ಕ್ರೀಡಾ ರಾಜನಾದ ಅಥ್ಲೆಟಿಕ್ಸ್ ನಲ್ಲಿ ಇಷ್ಟೊಂದು ದಾಖಲೆಯನ್ನು ಸಾಧಿಸಿರುವುದು ಆಳ್ವಾಸ್ ನ ವಿಶೇಷತೆ ಎಂದರು. ಇದಲ್ಲದೆ ದೇಶಿಯ ಮಟ್ಟದಲ್ಲಿ ಕಬಡ್ಡಿ, ಕ್ರಾಸ್ ಕಂಟ್ರಿ, ವೇಟ್ ಲಿಫ್ಟಿಂಗ್, ಬಾಲ್ ಬ್ಯಾಡ್ಮಿಂಟನ್, ಕೊಕ್ಕೊ ಇತ್ಯಾದಿ ಕ್ರೀಡೆಗಳನ್ನು ಆಳ್ವಾಸ್ ಪಾರಮ್ಯವನ್ನು ಮೆರೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಪುರುಷರ ಉದ್ದ ಜಗಿತ ಸ್ಪರ್ಧೆಯ ಪುರುಷೋತ್ತಮ ಹಾಗೂ ಮಹಿಳೆಯರ 100 ಮೀಟರ್ ಓಟದ ಪವಿತ್ರ ಪಡೆದುಕೊಂಡರು.
ನೂತನ ಕೂಟ ದಾಖಲೆ ನಿರ್ಮಿಸಿ, ನಗದು ಬಹುಮಾನ: ಪುರುಷರ ವಿಭಾಗದಲ್ಲಿ ಗಗನ್ 5000 ಮೀಟರ್ ಓಟ, ಚಂದನ್ ಹತ್ತು ಸಾವಿರ ಮೀಟರ್ ಒಟ, ಅಮನ್ ಸಿಂಗ್ ಪೋಲ್ ವಾರ್ಟ್ ಹಾಗೂ ರಿಲೇ ತಂಡ ಕೂಟ ದಾಖಲೆ, ಮಹಿಳೆಯರ ವಿಭಾಗದಲ್ಲಿ ಕೆಎಂ ಶಾಲಿನಿ 20 ಕಿಲೋಮೀಟರ್ ನಡಿಗೆ, ಸುನೀತಾ ಡಿಸ್ಕಸ್ ಥ್ರೋ, ಶೃತಿ ಹ್ಯಾಮರ್ ಥ್ರೋ, ಪ್ರಜ್ಞ 400 ಮೀಟರ್ ಹರಡಲ್ಸ್, ಮಂಜು ಯಾದವ್ ಸ್ಟೀಪಲ್ ಚೇಸ್, ಕಮಲ್ಜಿತ್ ಕೌರ್ ಹೆಪ್ಟಾತ್ಲಾಲ್ ಹಾಗೂ 400 ಮೀಟರ್ ರಿಲೇ ಕೂಟ ದಾಖಲೆ ನಿರ್ಮಿಸಿದ್ದಾರೆ. ಈ ಎಲ್ಲಾ 11 ಜನ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ತಲೆ 10,000 ನಗದು ಬಹುಮಾನವನ್ನು ನೀಡಿರುತ್ತದೆ.
ರಾಷ್ಟ್ರಮಟ್ಟದ ಅಂತರ್ ವಿವಿ ಅಥ್ಲೆಟಿಕ್ಸ್: ಈಗಾಗಲೇ ನಡೆದ ಕ್ರೀಡಾಕೂಟದಲ್ಲಿ ಪಾರಮ್ಯವನ್ನು ಮೆರೆದ ಆಳ್ವಾಸ್ ನ 75 ಕ್ರೀಡಾಪಟುಗಳಿಗೆ ಒಡಿಶಾದ ಕಳಿಂಗ ವಿವಿ ಎಲ್ಲಿ ಡಿಸೆಂಬರ್ 26 ರಿಂದ 31 ರವರೆಗೆ ನಡೆಯುವ ಕ್ರೀಡಾಕೂಟಕ್ಕೆ ಅರ್ಹತೆಯನ್ನು ಪಡೆದಿರುತ್ತಾರೆ. ಎಲ್ಲರನ್ನು ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವಾ ಅಭಿನಂದಿಸಿದ್ದಾರೆ.
ಕ್ರೀಡಾಳುಗಳಿಗೆ ವಿಶೇಷ ಪ್ರಾತಿನಿಧ್ಯ:- ಆಳ್ವಾಸ್ ಶಿಕ್ಷಣ ಸಂಸ್ಥೆಯು ಪ್ರತಿ ವರ್ಷ ಸುಮಾರು 600 ಕ್ರೀಡಾಪಟುಗಳನ್ನು ಆಯೋಜಿಸುತ್ತಿದ್ದು ವರ್ಷಕ್ಕೆ 10 ಕೋಟಿ ರೂಪಾಯಿ ಎಷ್ಟು ಖರ್ಚು ಅವರಿಗಾಗಿ ವ್ಯಯಿಸುತ್ತಿದೆ. ಮಕ್ಕಳ ಇಡೀ ವರ್ಷದ ಬೆವರಿಗೆ ಆಳ್ವಾಸ್ ಅತ್ಯುತ್ತಮವಾಗಿ ಸ್ಪಂದಿಸುತ್ತಿದ್ದು ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗೆ ತಿಂಗಳಿಗೆ 15 ರಿಂದ 25 ಸಾವಿರ ರೂಪಾಯಿಗಳಷ್ಟು ವಿದ್ಯಾರ್ಥಿ ವೇತನವನ್ನು ನೀಡಿ ಸಲಹುತ್ತಿದೆ. ಆದುದರಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳು ಆಳ್ವಾಸ್ ನತ್ತ ಮುಖ ಮಾಡಿರುವುದು ತಿಳಿದು ಬರುತ್ತದೆ.