ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಇರುವೈಲು ರಸ್ತೆಯಲ್ಲಿರುವ ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸಮಾಜ ಮಂದಿರದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ವಾಸುದೇವ ಭಟ್ ವಹಿಸಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶ್ ವಾರ್ಷಿಕ ವರದಿ ಮಂಡಿಸಿ, ಯೋಜನೆಗಳನ್ನು ತಿಳಿಸಿದರು. ಪರಿಶೋಧಿತ ಲೆಕ್ಕಪತ್ರಗಳನ್ನು ನಯನಾ ಮಂಡಿಸಿದರು. ನಿಖಿತ ಮುಂದಿನ ವರ್ಷದ ಬಜೆಟ್ ಅನ್ನು ಓದಿದರು.
ನಿರ್ದೇಶಕರುಗಳಾದ ರಾಜೇಶ್ ಎಂ ಬಂಗೇರ ಸ್ವಾಗತಿಸಿದರು. ಶಾಂತರಾಮ ಕುಡ್ವ ಕಾರ್ಯಕ್ರಮ ನಿರೂಪಿಸಿದರು. ಕೇಶವ ಹೆಗ್ಡೆ ವಂದಿಸಿದರು.